ಗುತ್ತಿಗಾರು : ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ತಾಲೂಕು,
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜನಜಾಗೃತಿ ವೇದಿಕೆ ಸುಳ್ಯ ಗುತ್ತಿಗಾರು ವಲಯ ಮತ್ತು ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಗುತ್ತಿಗಾರು ವಲಯ ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಸಲಾಯಿತು.

ಜನ ಜಾಗೃತಿ ಗುತ್ತಿಗಾರು ವಲಯದ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ಗುತ್ತಿಗಾರು ವಲಯದ ಕಮಿಲ – ಮೊಗ್ರ -ಬಳ್ಳಕ್ಕ ಒಕ್ಕೂಟದ ಲೋಕೇಶ ಪೀರನಮನೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ವಲಯದ ಮೇಲ್ವಿಚಾರಕರಾದ ರಾಜೇಶ್ ಮಾಡಿದರು

.
ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಮಧುಕರ ಮುಳುಬಾಗಿಲು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೊಗ್ರ ಕಾರ್ಯ ಕೇತ್ರದ ಸೇವಾಪ್ರತಿನಿಧಿ ಅಶ್ವಿನಿ ಮತ್ತು ಒಕ್ಕೂಟದ ಪಧಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಗುತ್ತಿಗಾರು ಒಕ್ಕೂಟದ ಸೇವಾ ಪ್ರತಿನಿಧಿಯಾದ ಲೋಕೇಶ್ವರ ಡಿ.ಆರ್ ರವರು ಕಾರ್ಯ ಕ್ರಮ ನಿರೂಪಿಸಿದರು.