ಸುಬ್ರಹ್ಮಣ್ಯ ಎಸ್ ಎಸ್ ಪಿ ಯು ಕಾಲೇಜು ಇದರ ಪ್ರೌಢಶಾಲಾ ವಿದ್ಯಾರ್ಥಿ ಸರಕಾರ ಉದ್ಘಾಟನೆ ಯನ್ನು ಪುತ್ತೂರು ಎ. ವಿ. ಜಿ ಪ್ರೌಢಶಾಲೆಯ ಆಡಳಿತಾಧಿಕಾರಿ ಗುಡ್ಡಪ್ಪ ಬಲ್ಯರವರು ನೆರವೇರಿಸಿದರು.
















ಮುಖ್ಯೋಪಾಧ್ಯಾಯರಾದ ಶ್ರೀಮತಿ ನಂದಾ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸರಕಾರದ ನಿರ್ದೇಶಕ ಸತೀಶ್ ನೂಚಿಲ ಪ್ರಾಸ್ತವಿಕ ಭಾಷಣ ಮಾಡಿದರು, ಚೇತಾಕ್ಷಿ ಮನೋಜ್ ಪ್ರತಿಜ್ಞಾವಿಧಿ ಬೋಧಿಸಿದರು.
ವಿದ್ಯಾರ್ಥಿ ನಾಯಕ ಪ್ರನ್ವಿತ್, ಉಪನಾಯಕಿ ಚಿನ್ಮಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಸಹಶಿಕ್ಷಕ ಕೃಷ್ಣಭಟ್ ಸ್ವಾಗತಿಸಿ, ಶಿಕ್ಷಕ ರಘು ಬಿಜೂರ್ ವಂದಿಸಿದರು . ಕಾರ್ಯಕ್ರಮವನ್ನು ಶಿಕ್ಷಕಿಯರಾದ ನಳಿನಿ ಮತ್ತು ಮೋಕ್ಷಾ ನಿರೂಪಿಸಿದರು.










