ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ಡಾಕ್ಟರ್ ಡೇ ಕಾರ್ಯಕ್ರಮವನ್ನು ಜು. 1ರಂದು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಒಎಲ್ಇ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ವಹಿಸಿದ್ದರು. ವೇದಿಕೆಯಲ್ಲಿ ಎಒಎಲ್ಇ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್ ಉಪಸ್ಥಿತರಿದ್ದರು.
















ಈ ಸಂದರ್ಭದಲ್ಲಿ ಮಾತನಾಡಿದ ಡಾ. ಕೆ.ವಿ ಚಿದಾನಂದರು ಸಮಾಜದಲ್ಲಿ ವೈದ್ಯರವ ಪಾತ್ರ ಮತ್ತು ವೈದ್ಯರಿಗೆ ಎದುರಾಗುವ ಸವಾಲುಗಳನ್ನು ಎದುರಿಸಿಕೊಂಡು ಮುನ್ನಡೆಯುವ ಬಗ್ಗೆ ವಿವರಿಸಿದರು. ವೈದ್ಯರುಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಕೆ.ವಿ.ಜಿ ಮೆಡಿಕಲ್ ಕಾಲೇಜಿನ ವೈದ್ಯರುಗಳಾದ ಡಾ. ಸತ್ಯವತಿ ಆರ್ ಆಳ್ವ ಡಾ. ಹೆರಾಲ್ಡ್ ಲೂಯಿಸ್, ಡಾ. ಬೀನಾ ರಾಣಿ ಮತ್ತು ಇತರ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೆಡಿಕಲ್ ವಿದ್ಯಾರ್ಥಿಗಳು ಡಾ. ಬಿ.ಸಿ ರಾಯ್ ರವರ ಜೀವನಗಾಥೆ ಮತ್ತು ಅವರ ಮೌಲ್ಯಗಳನ್ನು ಪ್ರಹಸನದ ಮೂಲಕ ಸಾದರಪಡಿಸಿದರು. ಕ್ಷಯರೋಗ ಚಿಕಿತ್ಸಾ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಪ್ರೀತಿರಾಜ್ ಬಲ್ಬಾಲ್ ಕಾರ್ಯಕ್ರಮವನ್ನು ಸಂಯೋಜಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.











