ಕೆ.ಎ.ಜಿ ಮೆಡಿಕಲ್ ಕಾಲೇಜ್ ಮತ್ತು ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಸಹಯೋಗದೊಂದಿಗೆ ಜೂನ್ 29 ರಂದು PELVIKON 2025 ಮತ್ತು 4ಕೆ 3ಡಿ ರುಬಿನ ಲಾಪ್ರೋಸ್ಕೋಪಿ ಮೆಷೀನ್‌ನನ್ನು ಉದ್ಘಾಟನಾ ಮತ್ತು ಪ್ರಾತ್ಯಕ್ಷಿಕ ಕಾರ್ಯಗಾರ ಕಾರ್ಯಕ್ರಮವನ್ನು ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವು ನಿಕ್ಷೇಪ್ ರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಡಾ. ಗೀತಾ ದೊಪ್ಪರವರು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷರಾದ ಡಾ. ಚಿದಾನಂದ ಕೆ ವಿ ರವರು ವಹಿಸಿದ್ದರು.















ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್, ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಸಿ ರಾಮಚಂದ್ರ ಭಟ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ. ವಿದ್ಯಾ ಭಟ್. ಅಧ್ಯಕ್ಷರು. KIAGE ಕನ್ಸಲೆಂಟ್ ಲಾಪ್ರೋಸ್ಕೋಪಿಕ್ ಸರ್ಜನ್, ರಾಧಾಕೃಷ್ಣ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಬೆಂಗಳೂರು, ಡಾ. ಜ್ಞಾನೇಶ್ವರಿ ಟಿ.ಎಲ್. ಉಪಾಧ್ಯಕ್ಷರು KIAGE ಕನ್ಸಲೆಂಟ್ ಲಾಪ್ರೋಸ್ಕೋಪಿಕ್ ಸರ್ಜನ್, ಬಿ.ಎಲ್ ಹಾಸ್ಪಿಟಲ್ ಬೆಂಗಳೂರು, ಡಾ. ರಾಜೇಶ್ ಭಕ್ತ ಕಾರ್ಯದರ್ಶಿ KIAGE ಕನ್ಸಲೆಂಟ್ ಲಾಪ್ರೋಸ್ಕೋಪಿಕ್ ಸರ್ಜನ್, ರೋಶಿನಿ ಲಾಪ್ರೋಸ್ಕೋಪಿಕ್ ಮತ್ತು ಇನ್‌ಪೆರ್ಟಿಲಿಟಿ ಸೆಂಟರ್, ಉಡುಪಿ ಹಾಗೂ ಕಾಲೇಜಿನ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಗೀತಾ ದೊಪ್ಪ, ವಿಭಾಗದ ಪ್ರೊಪೆಸರ್ ಡಾ. ರವಿಕಾಂತ್ ಜಿ.ಓ ಹಾಗೂ ಅರಿವಳಿಕೆ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಬೀನಾ ರಾಣಿ ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ರವಿಕಾಂತ್ ಜಿ.ಒ ವಂದಿಸಿ, ಡಾ. ಎಸ್ ಸಾಯಿದರ್ಶಿನಿ, ಡಾ. ಆರ್ ಕೀರ್ತನ ಇವರು ಕಾರ್ಯಕ್ರಮ ನಿರೂಪಿಸಿದರು. ಪ್ರಾತ್ಯಕ್ಷಿಕ ಕಾರ್ಯಗಾರದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಭಾಗವಹಿಸಿದ್ದರು.










