ದಿನಕ್ಕೊಂದು ಕಡೆ ಬಾಕಿಯಾಗುತ್ತಿರುವ ವಾಹನಗಳು



ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪೈಪ್‌ಲೈನ್‌ಗೆ ಬಿದ್ದ ಬಸ್‌ನ ಟಯರ್ ಹೂತು ಹೋಗಿ ಬಸ್ ಬಾಕಿಯಾದ ಘಟನೆ ಇಂದು ಹರಿಹರದ ಕಜ್ಜೋಡಿ ಕ್ರಾಸ್ ಬಳಿ ನಡೆದಿದೆ.
ವ್ಯಾನ್ ಒಂದಕ್ಕೆ ಸೈಡ್ ಕೊಡುವಾಗ ಪೈಪ್‌ಲೈನ್ ಬಗ್ಗೆ ಮಾಹಿತಿ ಇರದ ಬಸ್ ಚಾಲಕ ಬಸ್ಸನ್ನು ರಸ್ತೆ ಬದಿಗೆ ಚಲಾಯಿಸಿದಾಗ ಈ ಘಟನೆ ನಡೆದಿದೆ. ಬಸ್ ಸುಬ್ರಹ್ಮಣ್ಯದಿಂದ ಹರಿಹರ ಆಗಿ ಕೊಲ್ಲಮೊಗ್ರಕ್ಕೆ ಚಲಿಸುತ್ತಿತ್ತು.
ಹರಿಹರ ಕೊಲ್ಲಮೊಗ್ರು ಭಾಗದಲ್ಲಿ ದಿನಕ್ಕೊಂದು ಕಡೆ ವಾಹನಗಳು ಇದೇ ರೀತಿ ಬಾಕಿ ಆಗುತ್ತಿದ್ದು ಜು.೪ ರಂದು ಕೊಲ್ಲಮೊಗ್ರದ ಕಟ್ಟ ಕ್ರಾಸ್ ಬಳಿ ಬಸ್ ಹೂತು ಬಾಕಿಯಾಗಿತ್ತು. ಕಳೆದ ವಾರವೂ ಇದೇ ರೀತಿ ಹಲವು ವಾಹನಗಳು ಬಾಕಿಯಾಗಿದ್ದವು.