ಬೆಳ್ಳಾರೆ ಕೆ.ಪಿ.ಎಸ್.ಪದವಿಪೂರ್ವ ವಿದ್ಯಾರ್ಥಿ ಸರಕಾರದ ಉದ್ಘಾಟನಾ ಕಾರ್ಯಕ್ರಮ

0

2025-26ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿ ಸರಕಾರದ ಉದ್ಘಾಟನಾ ಕಾರ್ಯಕ್ರಮ ಹಾಗೂ
ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಜು. 1ರಂದು ಸಂಸ್ಥೆಯ ಕೆ.ಪಿ.ಎಸ್.
ಸಭಾಂಗಣದಲ್ಲಿ ನಡೆಸಲಾಯಿತು.


ಎಸ್.ಡಿ.ಎಂ.ಸಿ.ಕಾರ್ಯಾಧ್ಯಕ್ಷರಾದ
ಶ್ರೀನಾಥ್ ರೈ ಬಾಳಿಲ ಇವರು ದೀಪ
ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಜನಾರ್ದನ ಕೆ ಎನ್.ರವರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ
ಬೋಧಿಸಿ,ಸಂಸ್ಥೆಯಲ್ಲಿ ವಿದ್ಯಾರ್ಥಿ
ಸರಕಾರದ ಮಹತ್ವ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ನಿರ್ವಹಿಸಬೇಕಾದ ಜವಾಬ್ದಾರಿಗಳ
ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಗೆ ಈ ವರ್ಷ
ದಾಖಲಾತಿಗೊಂಡ ಪ್ರಥಮ ಪಿ.ಯು.ಸಿ.ವಿದ್ಯಾರ್ಥಿಗಳನ್ನು ದ್ವಿತೀಯ ಪಿ.ಯು.ಸಿ.ವಿದ್ಯಾರ್ಥಿಗಳು ಸ್ವಾಗತಿಸಿದರು.ವೇದಿಕೆಯಲ್ಲಿ
ಅತಿಥಿಗಳೊಂದಿಗೆ ವಿದ್ಯಾರ್ಥಿ
ನಾಯಕ ಮೋಕ್ಷಿತ್ ಎಂ. ಹಾಗೂ
ಉಪನಾಯಕಿ ಶ್ರುತಿ ಕೆ.ಹಾಜರಿದ್ದರು.ರಾಜ್ಯಶಾಸ್ತ್ರ ಉಪನ್ಯಾಸಕರಾದ ಮಹೇಶ್
ಕಾರ್ಯಕ್ರಮ ನಿರ್ವಹಿಸಿದರು.
ಉಪನ್ಯಾಸಕಿಯಾದ ಪ್ರಮೀಳಾರವರು ಸ್ವಾಗತಿಸಿ,ವಿಜಯಾರವರು
ವಂದಿಸಿದರು.