ಅಜ್ಜಾವರ ಕಲ್ಲಗುಡ್ಡೆಯಲ್ಲಿ ಕೆರೆಗೆ ಬಿದ್ದ ದನದ ರಕ್ಷಣೆ ಮಾಡಿದ ಅಗ್ನಿಶಾಮಕ ಇಲಾಖೆ

0

ಅಜ್ಜಾವರ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಕೆರೆಗೆ ಬಿದ್ದ ದನವನ್ನು ಅಗ್ನಿಶಾಮಕ ಇಲಾಖೆಯವರು ಸ್ಥಳೀಯರ‌ ಸಹಕಾರದಿಂದ ಮೇಲಕ್ಕೆತ್ತಿದ ಘಟನೆ ಜು.5ರಂದು ವರದಿಯಾಗಿದೆ.

ಶ್ರೀಧರ ಕಲ್ಲಗುಡ್ಡೆ ಎಂಬವರ ಜಾಗದಲ್ಲಿರುವ ಕೆರೆಗೆ ದೊಡ್ಡ ಗಾತ್ರದ ದನವೊಂದು ಮಧ್ಯಾಹ್ನ 3 ರ ಸುಮಾರಿಗೆ ಬಿತ್ತು.‌ಮೇಲೆ ಬರಲು ದಾರಿ ಇರಲಿಲ್ಲ. ದನ‌ ಬಿದ್ದಿರುವುದು ಗೊತ್ತಾಗಿ ಊರವರೆಲ್ಲ‌ ಸೇರಿದರು. ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಯಿತು. ಅವರು‌ ಬಂದರು. ಬಳಿಕ ಊರವರ ಸಹಕಾರದಿಂದ ದನವನ್ನು ಇಲಾಖೆಯವರು‌ ಕೆರೆಯಿಂದ ಮೇಲೆತ್ತಿ ರಕ್ಷಣೆ ಮಾಡಿದರು.