ಆಲೆಟ್ಟಿ ಮೊಸರು ಕುಡಿಕೆ ಉತ್ಸವದ ಸಮಿತಿ ರಚನೆ

0

ಅಧ್ಯಕ್ಷ- ರಾಧಾಕೃಷ್ಣ ರೈ ಆಲೆಟ್ಟಿ, ಕಾರ್ಯದರ್ಶಿ- ಸುನಿಲ್ ಗುಂಡ್ಯ, ಖಜಾಂಜಿ- ನಾಗರಾಜ್ ಬಿ.

ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಅ.17 ರಂದು ಆಲೆಟ್ಟಿ ಯಲ್ಲಿ ನಡೆಯಲಿರುವ 3 ನೇ ವರ್ಷದ ಆಲೆಟ್ಟಿ ಮೊಸರು ಕುಡಿಕೆ ಉತ್ಸವದ ಪೂರ್ವ ಭಾವಿ ಸಭೆ ಹಾಗೂ ಉತ್ಸವ ಸಮಿತಿಯ ರಚನೆಯು ಜು.6 ರಂದು ಆಲೆಟ್ಟಿ ಸದಾಶಿವ ಸಭಾಭವನದಲ್ಲಿ ನಡೆಯಿತು.

ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ 2025 ರ ಉತ್ಸವ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನಿವೃತ್ತ ಯೋಧ ರಾಧಾಕೃಷ್ಣ ರೈ ಆಲೆಟ್ಟಿ, ಕಾರ್ಯದರ್ಶಿ ಸುನಿಲ್ ಗುಂಡ್ಯ, ಕೋಶಾಧಿಕಾರಿ ನಾಗರಾಜ್ ಬಡ್ಡಡ್ಕ ರವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಅಶೋಕ ಪ್ರಭು ಸುಳ್ಯ, ತೀರ್ಥಕುಮಾರ್ ಕುಂಚಡ್ಕ,ಅಚ್ಚುತ ಮಣಿಯಾಣಿ ಆಲೆಟ್ಟಿ,ಜಯಪ್ರಕಾಶ್ ಕುಂಚಡ್ಕ, ಶ್ರೀನಾಥ್ ಆಲೆಟ್ಟಿ,ಶ್ರೀಕಾಂತ್ ಗೋಳ್ವಾಲ್ಕರ್,
ಶಿವಪ್ರಸಾದ್ ಆಲೆಟ್ಟಿ,ಉದಯ ಕುಡೆಕಲ್ಲು, ರಾಮಚಂದ್ರ ಆಲೆಟ್ಟಿ, ಮಹಾಬಲ ರೈ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ, ಕಮಲಾಕ್ಷ ಬಡ್ಡಡ್ಕ ರವರನ್ನು ಆಯ್ಕೆ ಮಾಡಲಾಯಿತು. ಗ್ರಾಮದ ಎಲ್ಲಾ ಭಾಗಗಳಿಂದ ಸದಸ್ಯರನ್ನಾಗಿ ಸೇರಿಸಲಾಯಿತು. ಗೌರವಾಧ್ಯಕ್ಷ ಲತೀಶ್ ಗುಂಡ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕ್ಲಬ್ ಪದಾಧಿಕಾರಿಗಳು ಮತ್ತು ‌ಸದಸ್ಯರು ಭಾಗವಹಿಸಿದರು.