ಮಳೆ ಬಂದಾಗ ಹಳ್ಳದಂತೆ ಆಗುತ್ತಿದೆ ಪಡ್ಪಿನಂಗಡಿ ಸಮೀಪ ರಾಜ್ಯ ಹೆದ್ದಾರಿ

0

ಪಾದಾಚಾರಿಗಳ ಗೋಳು ಕೇಳುವವರೇ ಇಲ್ಲ

ಮಳೆ ನೀರು ಹರಿದು ಹೋಗಲು ಸಮಪರ್ಕವಾಗಿ ರಸ್ತೆ ಬದಿಯಲ್ಲಿ ಚರಂಡಿ ಇಲ್ಲದಿರುವುದರಿಂದ ಪಡ್ಪಿನಂಗಡಿ ಸಮೀಪ ರಾಜ್ಯ ಹೆದ್ದಾರಿ ಹಳ್ಳದಂತೆ ಆಗುತ್ತದೆ. ಈ ರಸ್ತೆಯ ಬದಿ ನಡೆದು ಹೋಗವ ವಿದ್ಯಾರ್ಥಿಗಳು, ಜನರ ಗೋಳು ಹೇಳತೀರದು. ಇದು ಈ ಭಾರಿ ಮೊದಲಲ್ಲ ಪ್ರತೀ ವರ್ಷವೂ ಇದೇ ಸಮಸ್ಯೆ.


ಇದೇ ರಸ್ತೆಯಲ್ಲಿ ಅನೇಕ ಕಡೆ ಇಂತಹ ಅನೇಕ ಸಮಸ್ಯೆಗಳಿವೆ. ಕೆಲವು ಕಡೆ ರಸ್ತೆಯ ಬದಿ ಚರಂಡಿಯೇ ಇಲ್ಲ. ಇನ್ನೂ ಕೆಲವು ಕಡೆ ಖಾಸಗಿ ರಸ್ತೆಗಳಿಂದ ಕೊಚ್ಚಿ ಬಂದ ಮಣ್ಣು ರಸ್ತೆಯಲ್ಲಿ ನಿಂತಿದ್ದು ಅನೇಕ ದ್ವೀಚಕ್ರ ಸವಾರರು ಬಿದ್ದು ಗಾಯ ಗೊಂಡಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ರಾಜ್ಯ ಹೆದ್ದಾರಿ ಕೇವಲ ಕೃತಕ ನೆರೆ, ಮಣ್ಣಿನಿಂದ ಭವಿಷ್ಯ ಕಳೆದು ಕೊಳ್ಳುತ್ತಿದೆ. ಆದರೆ ಲೋಕೋಪಯೋಗಿ ಇಲಾಖೆಯವರ. ಈ ಬಗ್ಗೆ ಹಾಕೆ ಗಮನ ಹರಿಸುತ್ತಿಲ್ಲ ಯಾಕೆ ಎಂಬ ಸಾರ್ವಜನಿಕರ ಪ್ರಶ್ನೆ.