ಸುಬ್ರಹ್ಮಣ್ಯ: ಮಠದಲ್ಲಿ ಭಕ್ತಾಧಿಗಳಿಗೆ ತಪ್ತಮುದ್ರಾಧಾರಣೆ

0

ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಆಷಾಢದ ಪ್ರಥಮ ಏಕಾದಶಿಯಾದ ಜು.6 ರಂದು ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ತಪ್ತಮುದ್ರಾಧಾರಣೆ ನೆರವೇರಿಸಿದರು.


ಆರಂಭದಲ್ಲಿ ಶ್ರೀ ಮಠದ ಅರ್ಚಕ ಶ್ರೀಕರ ಉಪಾಧ್ಯಾಯರು ಸುದರ್ಶನ ಹೋಮ ನೆರವೇರಿಸಿದರು. ನಂತರ ಶ್ರೀಪಾದರು ಪ್ರಥಮವಾಗಿ ಸ್ವಯಂ ಮುದ್ರಾಧಾರಣೆ ಮಾಡಿಕೊಂಡರು.


ಆನಂತರ ಅರ್ಚಕರಿಗೆ, ಪುರೋಹಿತರಿಗೆ ಹಾಗೂ ಭಕ್ತರಿಗೆ ಮುದ್ರಾಧಾರಣೆ ನೆರವೇರಿಸಿದರು.ನಂತರ ಫಲಮಂತ್ರಾಕ್ಷತೆ ನೀಡಿ ಹರಸಿದರು. ನೂರಾರು ಭಕ್ತರು ಪಾಲ್ಗೊಂಡರು.