ವೈಫೈ ಸೌಲಭ್ಯ ಸಹಿತ ಹಲವು ಕೊಡುಗೆಗಳ ಹಸ್ತಾoತರ
ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಆಂಗ್ಲ ಶಿಕ್ಷಣ ಪಡೆಯುವಂತಾಗಬೇಕು : ಶಾಸಕಿ ಭಾಗೀರಥಿ ಮುರುಳ್ಯ
ಗುತ್ತಿಗಾರಿನ ಬಳ್ಳಕ ಅಂಗನವಾಡಿ ಕೇಂದ್ರದಲ್ಲಿ ಎಲ್ ಕೆಜಿ ಹಾಗೂ ಯುಕೆಜಿ ತರಗತಿಗಳ ಪ್ರಾರಂಭೋತ್ಸವ ಹಾಗೂ ಪೋಷಣ್ ಅಭಿಯಾನ ಕಾರ್ಯಕ್ರಮ ಜು. 7 ರಂದು ನಡೆಯಿತು.
ಶಾಸಕಿ ಕು.ಭಾಗೀರಥಿ ಮುರುಳ್ಯ ಎಲ್ ಕೆ ಜಿ ಮತ್ತು ಯುಕೆಜಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿ, ” ಬಡ ಮಕ್ಕಳು, ಮದ್ಯಮ ವರ್ಗದ ಮಕ್ಕಳು ಕೂಡ ಆಂಗ್ಲ ಭಾಷೆ ಕಲಿಯುವಂತಾ ಗಬೇಕು. ಮುಂದಿನ ದಿನಗಳಲ್ಲಿ ಎನ್.ಜಿ.ಓ. ಮೂಲಕ ಬಳ್ಳಕ ಅಂಗನವಾಡಿ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು” ಎಂದರು.
ಗುತ್ತಿಗಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಮೂಕಮಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಿ.ಡಿ.ಪಿ.ಒ. ಶ್ರೀಮತಿ ಶೈಲಜಾರವರು ಉಪಸ್ಥಿತರಿದ್ದು ಶುಭ ಹಾರೈಸಿದರು.















ಗೌರವ ಉಪಸ್ಥಿತಿಯಲ್ಲಿ ಗುತ್ತಿಗಾರು ಗ್ರಾ. ಪಂ. ಪಿಡಿಓ ಧನಪತಿ, ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ದೀಪಿಕಾ, ಗ್ರಾಮ ಪಂಚಾಯತ್ ಸದಸ್ಯೆಯರಾದ ಶ್ರೀಮತಿ ಶಾರದಾ ಮುತ್ಲಜೆ, ಶ್ರೀಮತಿ ಲತಾ ಆಜಡ್ಕ,
ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಪವಿತ್ರ ಧನoಜಯ ಮೊಗ್ರ, ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರವೀಣ್ ಮುಂಡೋಡಿ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಕಾರ್ಯದರ್ಶಿ ಭವಾನಿಶಂಕರ ಪೈಲಾಜೆ, ಎನ್ ಎಸ್ ಎಸ್ ಸೇವಾ ಸಂಗಮದ ಸುಜಿತ್ ಮೊಗ್ರ ಭಾಗವಹಿಸಿದ್ದರು. ಅಂಗನವಾಡಿಗೆ ವಿವಿಧ ವಸ್ತುಗಳ ಕೊಡುಗೈ ನೀಡಿದ ದಾನಿಗಳಾದ ಸುಬ್ರಹ್ಮಣ್ಯ ಇನ್ನರ್‌ವೀಲ್ ಕ್ಲಬ್
ಪೂರ್ವಾಧ್ಯಕ್ಷೆ ಶ್ರೀಮತಿ ಸರೋಜ ಮಾಯಿಲಪ್ಪ ಸಂಕೇಶ,ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ, ಕ್ಷಮಂತ್ ಕಡವೆಪಳ್ಳ, ಶ್ರೀಮತಿ ಶಿಶಿಮ ಜಿತೇಶ್ ಜಾಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಅಂಗನವಾಡಿಗೆ ಕೊಡುಗೈ ದಾನಿಗಳು ನೀಡಿದ ವೈ ಫೈ ಸೌಲಭ್ಯ, ಟೇಬಲ್, ಅಗ್ನಿ ಸುರಕ್ಷಾ ಕಿಟ್, ತೂಕ ಅಳೆಯುವ ಯಂತ್ರ ಕೊಡುಗೆ ಹಸ್ತಾಂತರ ನಡೆಯಿತು.
ಪೋಷಣ್ ಅಭಿಯಾನದ ಅಂಗವಾಗಿ ಶ್ರೀಮತಿ ಹೇಮಲತಾರವರಿಗೆ ಸೀಮಂತ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ದಾನಿಗಳನ್ನು, ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಳ್ಳಕ ಶಾಲಾ ಶಿಕ್ಷಕಿ ಸುಷ್ಮಾ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಲತಾ ಅಂಬೆಕಲ್ಲು ವಂದಿಸಿದರು. ಅಭಿಲಾಷ ಕಾರ್ಯಕ್ರಮ ನಿರೂಪಿಸಿದರು. ಬಾಲವಿಕಾಸ ಸಮಿತಿಯ ಸದಸ್ಯರು
ಸಹಕರಿಸಿದರು.
ವೈಫೈ ಸೌಲಭ್ಯದ ತಾಲೂಕಿನ ಮೊದಲ ಅಂಗನವಾಡಿ ಎಂಬ ಹೆಗ್ಗಳಿಕೆ
ಶಮಂತ್ ಕಡವೆಪಳ್ಳ ಮತ್ತು ಮನೆಯವರು ಅಂಗನವಾಡಿ ಕೇಂದ್ರಕ್ಕೆ ನೀಡಿದ ವೈಫೈ ಸೌಲಭ್ಯವು ಸುಳ್ಯ ತಾಲೂಕಿನಲ್ಲೇ ವೈ ಫೈ ಉಪಯೋಗಿಸುವ ಮೊದಲ ಅಂಗನವಾಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.










