ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆಯ ಆಮಂತ್ರಣ ಬಿಡುಗಡೆ
ದುಗ್ಗಲಡ್ಕದ ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ವಾರ್ಷಿಕ ಮಹಾಸಭೆ ಜು.6 ರಂದು ಯುವಕ ಮಂಡಲದ ಕಟ್ಟಡದಲ್ಲಿ ನಡೆಯಿತು.
ವೇದಿಕೆಯಲ್ಲಿ ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ, ಅಧ್ಯಕ್ಷ ರಮೇಶ್ ನೀರಬಿದಿರೆ, ಗೌರವಾಧ್ಯಕ್ಷೆ ನವ್ಯ ದಿನೇಶ್ ಕೊಯಿಕುಳಿ, ಕಾರ್ಯದರ್ಶಿ ಕೆ.ಟಿ.ಭಾಗೀಶ್,ಯುವಕ ಮಂಡಲದ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ, ಗೌರವಾಧ್ಯಕ್ಷ ಚೇತನ್ ಕಲ್ಮಡ್ಕ,ಕಾರ್ಯದರ್ಶಿ ಜಯಂತ ಕೊಯಿಕುಳಿ ಉಪಸ್ಥಿತರಿದ್ದರು.

ವಾರ್ಷಿಕ ವರದಿಗಳನ್ನು ಜಯಂತ ಕೊಯಿಕುಳಿ ಮತ್ತು ಕೆ.ಟಿ.ಭಾಗೀಶ್ ವಾಚಿಸಿದರು.ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿಗಳಾದ ಚಂದ್ರನ್ ಕೂಟೇಲು ಮತ್ತು ಪ್ರಿಯಾ ಸದಾನಂದ ವಾಚಿಸಿದರು.
ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ, ಪೂರ್ವಾಧ್ಯಕ್ಷ ಬಾಲಕೃಷ್ಣ ನಾಯರ್ ನೀರಬಿದಿರೆ, ಶ್ರೀ ಕೃಷ್ಣ ಮಂದಿರ ಸೇವಾ ಸಮಿತಿ ಅಧ್ಯಕ್ಷ ಶಶಿಧರ ಎಂ.ಜೆ. ಶುಭಹಾರೈಸಿದರು. ಜಂಟಿ ಸಂಘಗಳ ಪದಾಧಿಕಾರಿಗಳನ್ನು ಮುಂದಿನ ವರ್ಷಕ್ಕೆ ಮುಂದುವರಿಸಲಾಯಿತು.















ಈ ಸಂದರ್ಭದಲ್ಲಿ ಆ.15 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಮತ್ತು ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಯ ಆಮಂತ್ರಣವನ್ನು ಬಿಡುಗಡೆ ಮಾಡಲಾಯಿತು.
ಮಾಜಿ ನ.ಪಂ.ಸದಸ್ಯ ಇಬ್ರಾಹಿಂ ನೀರಬಿದಿರೆ ಸೇರಿದಂತೆ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವಕ ಮಂಡಲದ ಪೂರ್ವಾಧ್ಯಕ್ಷ ಭವಾನಿಶಂಕರ ಕಲ್ಮಡ್ಕ ಸ್ವಾಗತಿಸಿ, ಕೆ.ಟಿ.ಭಾಗೀಶ್ ವಂದಿಸಿರು.ಯುವಕ ಮಂಡಲ ಪೂರ್ವಾಧ್ಯಕ್ಷ ಮನೋಜ್ ಪಾನತ್ತಿಲ ಕಾರ್ಯಕ್ರಮ ನಿರೂಪಿಸಿದರು.










