ಪ್ಲಾಸ್ಟಿಕ್ ‌ಮುಕ್ತ ಕನಕಮಜಲು : ಗ್ರಾಮಸಭೆ ನಿರ್ಧಾರ – ಅನುಷ್ಠಾನ ಮಾಡಿದ್ದೇವೆ : ಮುಂದುವರಿಸುತ್ತೇವೆ : ಗ್ರಾ.ಪಂ.

0

ಕನಕಮಜಲು ಗ್ರಾಮ ಸಭೆ

ಕನಕಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ 2025-26 ನೇ ಗ್ರಾಮ ಸಭೆಯು ಪಂಚಾಯತ್ ಸಭಾಂಗಣದಲ್ಲಿ ಜು.7ರಂದು‌ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಶಾರದಾ ಉಗ್ಗಮೂಲೆ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಸದಸ್ಯರುಗಳಾದ ಇಬ್ರಾಹಿಂ ಕಾಸಿಂ‌ ಕನಕಮಜಲು, ಜಗನ್ನಾಥ ಬಿ.ಎಚ್., ಶ್ರೀಮತಿ ಪ್ರೇಮಲತಾ ಕೆ.ಎನ್.‌ಪಂಜಿಗುಂಡಿ, ಶ್ರೀಮತಿ ದೇವಕಿ ಕುದ್ಕುಳಿ, ಶ್ರೀಮತಿ ಸುಮಿತ್ರ ಕುತ್ಯಾಳ ವೇದಿಕೆಯಲ್ಲಿ ಇದ್ದರು.

ನೋಡೆಲ್ ಅಧಿಕಾರಿಯಾಗಿ ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಆಗಮಿಸಿದ್ದರು.

ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು. ವಸಂತ ಗಬಲಡ್ಕ, ವಿಜಯಕುಮಾರ್ ನರಿಯೂರು, ಈಶ್ವರ ಕೊರಂಬಡ್ಕ, ನಾರಾಯಣ ಬೊಮ್ಮೆಟ್ಟಿ, ಪದ್ಮನಾಭ ಭಟ್ ಕನಕಮಜಲು, ಹೇಮಂತ್ ಮಠ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಕನಕಮಜಲು ಗ್ರಾಮ ಪ್ಲಾಸ್ಟಿಕ್ ಮುಕ್ತ ಮಾಡಬೇಕಾಗಿ ಈ ಹಿಂದೆ ಗ್ರಾಮಸಭೆಯಲ್ಲಿ ಗ್ರಾಮಸ್ಥರೇ ಬೇಡಿಕೆ ಇಟ್ಟಿದ್ದು ಗ್ರಾಮ ಸಭೆಯ ನಿರ್ಧಾರವನ್ನು ನಾವು ಅನುಷ್ಠಾನ ಮಾಡಿದ್ದೇವೆ. ಅದನ್ನು ಮುಂದುವರಿಸುತ್ತೇವೆ. ಗ್ರಾಮಸ್ಥರು ಸಹಕರಿಸಬೇಕೆಂದು ಉಪಾಧ್ಯಕ್ಷ ಶ್ರೀಧರ ಕುತ್ಯಾಳ ತಿಳಿಸಿದರು.