ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾರವರಿಗೆ ಸನ್ಮಾನ

0

ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವೀಧೇತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘ ಸುಳ್ಯ ತಾಲೂಕು ಘಟಕ ವತಿಯಿಂದ ಇತ್ತೀಚೆಗೆ ವಯೋ ನಿವೃತ್ತಿಗೊಂಡ ಕುಕ್ಕುಜಡ್ಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಸ್ ಇವರನ್ನು ಬೊಳುಬೈಲಿನಲ್ಲಿರುವ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.

ತಾಲೂಕು ಘಟಕದ ಅಧ್ಯಕ್ಷ ದೇವರಾಜ್ ಎಸ್. ಕೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಘಟಕದ ಕಾರ್ಯದರ್ಶಿ ಶ್ರೀಮತಿ ಸುನಂದ ಸನ್ಮಾನ ಪತ್ರ ವಾಚಿಸಿದರು. ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ವೀಣಾ ಕೆ ಮತ್ತು ಶ್ರೀಮತಿ ಸುನಂದ ಇವರು ನಿವೃತ್ತ ಶಿಕ್ಷಕಿಯನ್ನು ಪೇಟ ತೋಡಿಸಿ, ಶಾಲು ಹೊದಿಸಿ, ಹೂವು, ಹಾರ, ಫಲ ತಾಂಬೂಲ, ಸನ್ಮಾನ ಪತ್ರ ನೀಡಿ ಸನ್ಮಾನಿಸಿದರು. ತಾಲೂಕು ಘಟಕದ ಖಜಾಂಚಿ ಚಂದ್ರಶೇಖರ ಪಾರೆಪ್ಪಾಡಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಅವರ ಪತಿಯವರಾದ ನಿವೃತ್ತ ಶಿಕ್ಷಕ ಲೋಕನಾಥ್ ಬಿ.ಕೆ, ತಾಲೂಕು ಘಟಕ ಘಟಕದ ಕಾರ್ಯದರ್ಶಿ ಅರುಣ ಕುಮಾರ್, ಶ್ರೀಮತಿ ಹೇಮಲತಾ ಅವರ ಅತ್ತೆ, ಶ್ರೀಮತಿ ಪಾರ್ವತಿ ಕೆ ಎಂ., ಶ್ರೀಮತಿ ಭುವನೇಶ್ವರಿ ದಯಾನಂದ. ಶ್ರೀಮತಿ ಗೀತಾ ಗಣೇಶ ಬಿ.ಕೆ., ಕೌಶಿಕ್. ಕೆ ಎಲ್., ಪ್ರತೀಕ್ ಬಿ.ಕೆ., ಶಿವರಾಂ, ಶ್ರೀಮತಿ ನಳಿನಿ ಶಿವರಾಂ ಮತ್ತಿತರರು ಉಪಸ್ಥಿತರಿದ್ದರು.