ಸುಳ್ಯ ಸರಕಾರಿ ಜೂನಿಯರ್ ಕಾಲೇಜ್ ವಠಾರದೊಳಗೆ ಬೀಳುವ ಸ್ಥಿತಿಯಲ್ಲಿ ವಾಲಿ ನಿಂತಿರುವ ವಿದ್ಯುತ್ ಕಂಬ

0

ತೆರವುಗೊಳಿಸದಿದ್ದಲ್ಲಿ ಅಪಾಯ ಖಚಿತ

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜ್ ಇದರ ವಠಾರದಲ್ಲಿ ವಿದ್ಯುತ್ ಕಂಬವೊಂದು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿ ವಾಲಿ ನಿಂತಿದ್ದು, ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ.

ಈ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ವಾಲಿರುವ ಕಂಬದ ಬದಿಯಲ್ಲಿ ಶೌಚಾಲಯವು ಕೂಡ ಇದ್ದು ತರಗತಿ ಬಿಡುವಿನ ವೇಳೆ ಸಾಕಷ್ಟು ವಿದ್ಯಾರ್ಥಿಗಳು ಇಲ್ಲಿ ನಡೆದಾಡುತ್ತಿರುತ್ತಾರೆ.

ಗಾಳಿ ಮಳೆಗೆ ಕಂಬ ಬುಡ ಸಮೇತ ಬಿದ್ದಲ್ಲಿ ಭಾರಿ ಅನಾಹುತ ಸಂಭವಿಸುವ ಮುನ್ಸೂಚನೆ ಇದ್ದು ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಬೇಕಾಗಿದೆ.

ಈ ಬಗ್ಗೆ ಶಾಲೆಯ ವತಿಯಿಂದ ಮೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ.