ತಮಿಳು ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರಿಗೆ ಸುಳ್ಯ ರಿಪಾರ್ಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ಮನವಿ

0

ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನಲ್ಲಿ ಕಳೆದ 53 ವರ್ಷಗಳಿಂದ ತಮಿಳು ಪುನರ್ವಸತಿದಾರರು 20 ರಿಂದ 25 ಸಾವಿರದಷ್ಟಿದ್ದು, ಅವರಿಗೆ ತಮ್ಮ ಚಟುವಟಿಕೆಗಳನ್ನು ಮಾಡಿಕೊಳ್ಳಲು ಸಮುದಾಯ ಭವನ ಬೇಕಾಗಿದೆ. ಆದ್ದರಿಂದ ತಮಿಳು ಸಮುದಾಯ ಭವನ ನಿರ್ಮಾಣಕ್ಕೆ ಒಂದು ಎಕ್ರೆ ಭೂಮಿಯನ್ನು ಮೀಸಲಿರಿಸಿಕೊಡಬೇಕೆಂದು ಸುಳ್ಯ ರಿಪಾರ್ಟ್ರಿಯೇಟ್ ವೆಲ್ಫೇರ್ ಟ್ರಸ್ಟ್ ಶಾಸಕಿ ಭಾಗೀರಥಿ ಮುರುಳ್ಯರನ್ನು ವಿನಂತಿಸಿದೆ.


ಜು.7 ರಂದು ಶಾಸಕರ ಕಚೇರಿಗೆ ಹೋದ ತಮಿಳು ಮುಖಂಡರು ಶಾಸಕರಿಗೆ ಮನವಿ ಅರ್ಪಿಸಿದರು. ಈ ಸಂದರ್ಭ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಸಂದ್ಯಾಗು ಕೌಡಿಚಾರ್, ಹಿರಿಯರಾದ ಸುಬ್ಬಯ್ಯ ಬಾಂಜಿಕೋಡಿ, ದಯಾಳನ್ ಮೇದಿನಡ್ಕ, ತಂಗವೇಲು ನಾಗಪಟ್ಣ, ಸುಂದರಲಿಂಗಂ ಐವರ್ನಾಡು, ಬೆಳ್ಳಾರೆ ಗ್ರಾ.ಪಂ.ಸದಸ್ಯೆ ಭವ್ಯ ಕಲ್ಲೋಣಿ, ಅರಂತೋಡು ಗ್ರಾ.ಪಂ.ಸದಸ್ಯೆ ಉಷಾ ಅಡ್ಯಡ್ಕ, ರಮೇಶ್ ಮೇದಿನಡ್ಕ, ಸೆಲ್ವರಾಜ್ ಕೂಟೇಲು, ಮಣಿ ಐವರ್ನಾಡು, ಶಂಕರಲಿಂಗಂ ಅಡ್ಯಡ್ಕ, ಜಾಲ್ಸೂರು ಗ್ರಾ.ಪಂ.ಸದಸ್ಯೆ ಅಂಬಿಕಾ ಕುಕ್ಕಂದೂರು ಉಪಸ್ಥಿತರಿದ್ದರು.