ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ

0

2025 – 26ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ಏನೆಕಲ್ಲು ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾದ ವಿಮಲಾ ರಂಗಯ್ಯ ಅವರಿಗೆ ಪ್ರಸಕ್ತ ಅಧ್ಯಕ್ಷ ರಾಜೇಶ್ ಏನ್ ಎಸ್ ಅವರಿಂದ ಪದಗ್ರಹಣ ಅಧಿಕಾರಿ ಲಯನ್ಸ್ ಜಿಲ್ಲೆ, 317D ಇದರ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಗೋವರ್ಧನ ಶೆಟ್ಟಿ ಪದ ಪ್ರಧಾನ ಮಾಡಿದರು. ಕಾರ್ಯದರ್ಶಿ ಗಾಯತ್ರಿ ಕೃಷ್ಣ ಕುಮಾರ್, ಖಜಾoಜಿ ಭಾರತಿ ದಿನೇಶ್ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿರುವರು. ಇದೇ ಸಂದರ್ಭದಲ್ಲಿ ಕ್ಲಬ್ಬಿಗೆ ವಿನ್ಯಾಸ್ ಹೊಸೊಳಿಕೆ ಹಾಗೂ ಮಹೇಶ್ ಕಿರಿಭಾಗ ಅವರುಗಳನ್ನ ನೂತನ ಸದಸ್ಯರುಗಳನ್ನಾಗಿ ಸೇರಿಸಿ ಪ್ರಮಾಣವಚನ ಬೋಧಿಸಲಾಯಿತು. ಈ ವರ್ಷದ ಕ್ಲಬ್ಬಿನ ಸರ್ವಿಸ್ ಆಕ್ಟಿವಿಟೀಸ್ ಅನ್ವಯ ಮರ್ದಾಳ ಜೀವನ್ ಜ್ಯೋತಿ ವಿಶೇಷ ಮಕ್ಕಳ ಶಾಲೆಗೆ ರೂ 10,000/= ಮಧ್ಯಾಹ್ನದ ಅನ್ನದಾನಕ್ಕಾಗಿ ಹಾಗೂ ಸುಬ್ರಹ್ಮಣ್ಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳ ಸಮವಸ್ತ್ರಕ್ಕಾಗಿ ರೂ 10,000/= ಸಹಾಯಧನ ನೀಡಲಾಯಿತು.


ಲಯನ್ಸ್ ಪ್ರಾಂತೀಯ ಅಧ್ಯಕ್ಷ ರಂಗಯ್ಯ ಶೆಟ್ಟಿಗಾರ್,ವಲಯ ಅಧ್ಯಕ್ಷ ದಿಲೀಪ್ ಬಾಬ್ಲು ಬೆಟ್ಟು, ನಿಕಟ ಪೂರ್ವ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಕಾರ್ಯದರ್ಶಿ ಕೃಷ್ಣ ಕುಮಾರ ಬಾಳುಗೋಡು, ಖಜಾಂಜಿ ಮೋಹನ್ ದಾಸ್ ರೈ, ಉಪಸ್ಥಿತರಿದ್ದರು.