
ನಿಂತಿಕಲ್ಲಿನಲ್ಲಿ ಚರಂಡಿ ಇಲ್ಲದೆ ರಸ್ತೆಯಲ್ಲಿ ಮಳೆನೀರು ಹರಿಯುತ್ತಿದ್ದು ಮಳೆ ಬಂದರೆ ಹೊಳೆಯಂತಾಗುತ್ತದೆ. ರಸ್ತೆಯು ಪೂರ್ತಿ ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.
















ಸಮವಸ್ತ್ರದ ಶಾಲಾ ಮಕ್ಕಳು ಹೋಗುವಾಗುವಾಗ ಕೆಸರು ನೀರು ಚೆಲ್ಲಿ ವಾಪಸು ಮನೆಗೆ ಹೋದದ್ದೂ ಇದೆ. ಒಂದು ಸೈಡ್ ಚರಂಡಿ ಇದ್ದು ಇನ್ನೊಂದು ಸೈಡು ಚರಂಡಿಯೇ ಇಲ್ಲ, ಈ ಪರಿಣಾಮದಿಂದ ರಸ್ತೆಯಲ್ಲಿಯೇ ಹರಿಯುತ್ತಿದೆ. ಪ್ರೌಢಶಾಲಾ ಮುಂಭಾಗ ರಿಕ್ಷಾದ ಅಶ್ರಫ್, ಅಬ್ದುಲ್ ರಝಕ್, ಉಬೈಸ್ ಸೇರಿ ಕೊಂಡು ಮಳೆಯಲ್ಲಿ ಹಾರೆಯಲ್ಲಿ ತಾತ್ಕಾಲಿಕ ನೀರು ಚರಂಡಿ ಸೇರುವಂತೆ ಮಾಡಿದರು. ದಿನನಿತ್ಯ ನೂರಾರು ವಾಹನಗಳು ಪಾದಾಚಾರಿಗಳು ಸಂಚರಿಸುವ ರಸ್ತೆಗೆ ಚರಂಡಿ ನಿರ್ಮಿಸಿ ಹೊಂಡ ಗುಂಡಿಯನ್ನು ಮುಚ್ಚಿಸಬೇಕೆಂದು ಸಂಬಂಧ ಪಟ್ಟವರು, ವಾಹನ ಸವಾರು ಅಗ್ರಹಿಸಿದ್ದಾರೆ.











