ಸುಬ್ರಹ್ಮಣ್ಯ: ಸ್ಥಗಿತವಾಗಿದ್ದ ವಿದ್ಯುತ್ ಸರಬರಾಜು ಮರು ಆರಂಭ

0

ಮೆಸ್ಕಾಂ ಸಿಬ್ಬಂದಿಗಳ ಕೆಲಸಕ್ಕೆ ಶ್ಲಾಘನೆ

ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಜು.6 ರ ಸಂಜೆ ಭಾರೀ ಗಾಳಿ ಮಳೆಗೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿತ್ತು., ಮೆಸ್ಕಾಂ ಸಿಬ್ಬಂದಿಗಳು ಭಾರೀ ಮಳೆಯ ನಡುವೆಯೇ ಪರಿಶ್ರಮದೊಂದಿಗೆ 11 ಕೆ.ವಿ. ವಿದ್ಯುತ್ ಲೈನ್‌ನ್ನು ದುರಸ್ತಿಪಡಿಸಿ, ಸುಬ್ರಹ್ಮಣ್ಯ ಸೇರಿದಂತೆ ಐನೆಕಿದು, ಬಾಳುಗೋಡು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ನಡುಗಲ್ಲು . ಗ್ರಾಮೀಣ ಭಾಗಗಳಿಗೆ ಜು.7 ರ ಸಂಜೆ ಮತ್ತೆ ವಿದ್ಯುತ್ ಪೂರೈಕೆಸಲು ಯಶಸ್ವಿಯಾಗಿದ್ದು ಅದಕ್ಕೆ ಶ್ಲಾಘನೆಯೂ ವ್ಯಕ್ತವಾಗಿದೆ.

ಭಾರೀ ಗಾಳಿಗೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಭಾರೀ ಗಾತ್ರದ ಮರವೊಂದು ಮುಖ್ಯ ವಿದ್ಯುತ್ ತಂತಿಗಳ ಮೇಲೆ ಬಿದ್ದಿತು. ಪರಿಣಾಮವಾಗಿ 2 ಬೃಹತ್ ವಿದ್ಯುತ್ ಕಂಬಗಳು ನೆಲಕ್ಕುರುಳಿದಿದ್ದವು, ಇನ್ನೆರಡು ಕಂಬಗಳು ವಾಲಿ ನಿಂತಿದ್ದವು. ತಂತಿಗಳು ಸಂಪೂರ್ಣ ಹಾನಿಗೊಂಡದ್ದವು. ಕೂಡಲೇ ಕಾರ್ಯಪ್ರವೃತ್ತರಾದ ಮೆಸ್ಕಾಂ ಸಿಬ್ಬಂದಿಗಳು ಅಂದು ಸಂಜೆಯಿಂದಲೇ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದರು. ಜು.7 ರ ದಿನವಿಡೀ ಕಾರ್ಯ ಮುಂದುವರಿದಿದ್ದು, ಮಳೆ ನಡುವೆಯೂ ಮರ ತೆರವು, ಹಾನಿಗೊಂಡ ಕಂಬಗಳು ಹಾಗೂ ತಂತಿಗಳನ್ನು ಸಂಪೂರ್ಣವಾಗಿ ತೆಗೆಯಲಾಯಿತು. ನಂತರ ನಾಲ್ಕು ಹೊಸ ಕಂಬಗಳನ್ನು ಸ್ಥಾಪಿಸಿ, ತಂತಿಗಳನ್ನು ಪುನರ್‌ಜೋಡಿಸಿ ಜು.7 ರ 7.30ರ ಹೊತ್ತಿಗೆ ವಿದ್ಯುತ್ ಸರಬರಾಜು ಮಾಡುವಲ್ಲಿ ಯಶಸ್ವಿಯಾದರು.
ಮೆಸ್ಕಾಂ ಅಭಿಯಂತರ ಸತೀಶ್ ಸಫಲ್ಯ ಅವರ ನಿರ್ದೇಶನದಲ್ಲಿ, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅಭಿಯಂತರ ಚಿದಾನಂದ ಕೆ. ಕನ್ನಡ್ಕ ಅವರ ಮಾರ್ಗದರ್ಶನದಲ್ಲಿ ದೇವಪ್ಪ ಅಂಜೇರಿ, ಪಾಲಾಕ್ಷಯ್ಯ, ಚಂದ್ರಕಾಂತ್ ಸೇರಿದಂತೆ 20ಕ್ಕೂ ಹೆಚ್ಚು ಮೆಸ್ಕಾಂ ಸಿಬ್ಬಂದಿಗಳು ನಿರಂತರವಾಗಿ ಕೆಲಸಮಾಡಿದರು