ಕೊಡಗು ಸಂಪಾಜೆ ಸ ಹಿ. ಪ್ರಾ ಶಾಲೆ ಎಸ್.ಡಿ.ಎಂ.ಸಿ ಪೋಷಕರ ಸಭೆ ಹಾಗೂ ಪದಾಧಿಕಾರಿಗಳ ಸಮಿತಿ ರಚನೆ

0

ಅಧ್ಯಕ್ಷರಾಗಿ ಜಗದೀಶ್ ಪರಮಲೆ , ಉಪಾಧ್ಯಕ್ಷ ಪರಮೇಶ್ವರ ಕೂವೆಕಾಡು

ಕೊಡಗು ಸಂಪಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಮಡಿಕೇರಿ ತಾಲೂಕು ) ಎಸ್.ಡಿ.ಎಂ.ಸಿ ಮತ್ತು ಪೋಷಕರ ಸಭೆಯನ್ನು ಶಾಲಾ ಸಭಾಂಗಣದಲ್ಲಿ ಜು.5 ರಂದುನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ. ಸಿ ಯ ಅಧ್ಯಕ್ಷ ಸ್ಥಾನದಿಂದ ನಿವೃತ್ತ ಗೊಳ್ಳಲಿರುವ ಶ್ರೀಧರ್ ಪಡ್ಪು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲಾ ಮಕ್ಕಳು ಪ್ರಾರ್ಥಸಿ ಬಳಿಕ ಪೋಷಕರ ಒಮ್ಮತದ ಅಭಿಪ್ರಾಯದಂತೆ ನೂತನ ಎಸ್ ಡಿ ಎಂ ಸಿ ರಚನೆ ನಡೆಯಿತು. ನೂತನ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಜಗದೀಶ್ ಪರಮಲೆ ಉಪಾಧ್ಯಕ್ಷ ಪರಮೇಶ್ವರ ಕೂವೆಕಾಡು ಸದಸ್ಯರಾಗಿ ಉದಯ ,ರಂಗಪ್ಪ , ಗೋಪಾಲ ಅರೆಕಲ್ಲು ,ಶ ಪ್ರವೀಣ್ ಕೂಟೇಲು , ವಿನೋದ್ , ಶ್ರೀಷಾ ಕುರಮಜಲು , ಧನಂಜಯ ಗಬಲಡ್ಕ, ಸಮೀರ್ ದೇವರಕೊಲ್ಲಿ ,ಶ್ರೀಮತಿ ಬಲ್ಕೀಸ್ ಸಂಪಾಜೆ ,ಶ್ರೀಮತಿ ಸರೋಜಾ ಚಡಾವು , ಶ್ರೀಮತಿ ಅಮಿತಾ ಹೊದ್ದಟ್ಟಿ , ಶ್ರೀಮತಿ ಶೋಭಾ ರಾಜೇಶ್ , ಶ್ರೀಮತಿ ಸುಮಿತ್ರ ಅರಮನೆ ತೋಟ, ಶ್ರೀಮತಿ ವಸಂತಿ, ಶ್ರೀಮತಿ ಅನಿತಾ , ಶ್ರೀಮತಿ ಉಷಾ ಕುಂಟಿಕಾನ . ಈ ಮೇಲಿನವರನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮಾದೇವಿ ಕಳಗಿ , ಪೂರ್ಣಿಮಾ ಅರೆಕಲ್ಲು ಸುರೇಶ್ ಪಿ.ಎಲ್ ಹಾಗೂ ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಕವಿತಾ ಕುಮಾರಿ ಸಮ್ಮುಖ ದಲ್ಲಿ ರಚನಾ ನಿಯಮದಂತೆ ರಚಿಸಲಾಯಿತು. ಪದನಿಮಿತ್ತ ಸದಸ್ಯರಾಗಿ ಶ್ರೀ ಸುರೇಶ್ ಪಿ.ಎಲ್ ರವರನ್ನು ಆರೋಗ್ಯ ಕಾರ್ಯಕರ್ತೆಯಾಗಿ ಶ್ರೀಮತಿ ಯಶೋದ ಸಿಸ್ಟರ್ ರವರನ್ನು ಅಂಗನವಾಡಿ ಕಾರ್ಯಕರ್ತೆಯಾಗಿ ಶ್ರೀಮತಿ ಪ್ರಮೀಳಾ ರವರನ್ನು ಕಾರ್ಯದರ್ಶಿಯಾಗಿ ಸಹ ಶಿಕ್ಷಕ ಶ್ರೀ ಚೇತನ್ ಬಿಆರ್ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪೋಷಕ ವೃಂದ, ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರು ಕವಿತಾ ಕುಮಾರಿ ಸರ್ವರನ್ನು ಸ್ವಾಗತಿಸಿ, ಗಾಯತ್ರಿ ವಂದಿಸಿದರು.