ಅಜ್ಜಾವರ : ಸುದ್ದಿ ಸುಳ್ಯ‌ಹಬ್ಬ ಗ್ರಾಮ‌ಸಮಿತಿ ಸಭೆ

0

ಸುದ್ದಿ ಸುಳ್ಯ ಹಬ್ಬ ಗ್ರಾಮ ಸಮಿತಿ ಅಜ್ಜಾವರ ಇದರ ಸಭೆಯು ಜು.8ರಂದು ಗ್ರಾಮ ಪಂಚಾಯತ್ ಸಭಾಂಗಣ ಅಜ್ಜಾವರದಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ಕರುಣಾಕರ ಕೊಡೆoಕೇರಿ ಯವರ ಸಭಾಧ್ಯಕ್ಷತೆ ಯಲ್ಲಿ ನಡೆಯಿತು.

ಈ ಸಭೆಯ ಮೊದಲಿಗೆ ಸಮಿತಿಯ ಉಪಾಧ್ಯಕ್ಷರಾದ ವಿಜಯ ಪಡ್ಡoಬೈಲು ಅವರು ನಿಧನರಾದ ಪ್ರಯುಕ್ತ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಮುಂದೆ ಸುದ್ದಿ ಗ್ರಾಮ ಸಮಿತಿ ವತಿಯಿಂದ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು. ಗ್ರಾಮದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುದ್ದಿ ಗ್ರಾಮ ಸಮಿತಿ ಪಾಲ್ಗೊಳ್ಳುವುದೆಂದು ನಿರ್ಣಯಿಸಲಾಯಿತು.ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ದೇವಕಿ ವಿಷ್ಣು ನಗರ,ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ಲ ಎ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲ ಎ.ಕೆ, ಸುದ್ದಿ ಗ್ರಾಮ ಸಮಿತಿ ಗೌರವಾಧ್ಯಕ್ಷರಾದ ಲೋಕಯ್ಯ ಅತ್ಯಾಡಿ, ಸoಯೋಜಕರಾದ ಶ್ರೀಮತಿ ಸಾವಿತ್ರಿ ಜಯನ್, ಕೋಶಾಧಿಕಾರಿ ಕು. ಲಕ್ಷ್ಮೀ ಪಲ್ಲತ್ತಡ್ಕ,ಸದಸ್ಯರಾದ ಶ್ರೀಮತಿ ರೇವತಿ ದೊಡ್ಡೇರಿ, ಬೀಟ್ ಪೊಲೀಸ್ ದೇವರಾಜ್, ಉಪಾಧ್ಯಕ್ಷರಾದ ಗುರುರಾಜ್ ಅಜ್ಜಾವರ ಸ್ವಾಗತಿಸಿ,ಕಾರ್ಯದರ್ಶಿ ಅಬ್ಬಾಸ್ ಅಜ್ಜಾವರ ಧನ್ಯವಾದ, ನಿರೂಪಣೆ ಯನ್ನು ಸಂಚಾಲಕರಾದ ಶ್ರೀಮತಿ ಶಶ್ಮಿ ಭಟ್ ಅಜ್ಜಾವರ ಮಾಡಿದರು.