ನಿಂತಿಕಲ್ಲು ತರಕಾರಿ ಅಂಗಡಿ ಮಾಲಕ ಅಬ್ದುಲ್ ರಹಿಮಾನ್ ಕಲ್ಲೇರಿ ನಿಧನ

0

ಎಣ್ಮೂರು ಗ್ರಾಮದ ಕಲ್ಲೇರಿ ನಿವಾಸಿ ನಿಂತಿಕಲ್ಲು ತರಕಾರಿ ಅಂಗಡಿ ಮಾಲಕ ಅಬ್ದುಲ್ ರಹಿಮಾನ್ ರವರು ಜು.9 ರಂದು ನಿಧನರಾದರು. ಮುಂಜಾನೆ ಅವರಿಗೆ ಮನೆಯಲ್ಲಿ ಒಮ್ಮಿಂದೊಮ್ಮಲೆ ಅನಾರೋಗ್ಯ ಕಾಣಿಸಿ ಕೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.
ಅವರಿಗೆ ಸುಮಾರು 62ವರುಷ ವಯಸ್ಸಾಗಿತ್ತು .ಅವರು ಅನೇಕ ವರ್ಷಗಳಿಂದ ನಿಂತಿಕಲ್ಲಿನಲ್ಲಿ ತರಕಾರಿ ಅಂಗಡಿ ನಡೆಸುತ್ತಿದ್ದರು.ಮೃತರು ಪತ್ನಿ ಮರಿಯಮ್ಮ, ಪುತ್ರ ಹಮೀದ್, ಪುತ್ರಿ ಸೌದ, ಅಳಿಯ, ಸೊಸೆ, ಮೊಮ್ಮಕ್ಕಳು ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ