ಸುಳ್ಯದಲ್ಲಿ ಪರಿಹಾರವೇ ಸಿಗದ ನಗರದ ಚರಂಡಿ ಸ್ಲ್ಯಾಬ್ ಗಳು

0

ಇದಕ್ಕೆ ಮುಕ್ತಿಯೇ ಇಲ್ಲ : ಸಾರ್ವಜನಿಕರಿಂದ ಆಕ್ರೋಶ

ಸುಳ್ಯ ನಗರದ ಮುಖ್ಯ ಬೀದಿಯ ಫುಟ್ ಬಾತ್ ಮೇಲೆ ಇರುವ ಸ್ಲಾಬಿನ ಸಮಸ್ಯೆಗಳು ಸುಳ್ಯದ ಜನತೆಗೆ ಮುಗಿಯದ ಗೋಳಾಗಿ ಮಾರ್ಪಟ್ಟಿದೆ.

ಒಂದಲ್ಲ ಒಂದು ಕಡೆಯಲ್ಲಿ ಈ ಅವಾಂತರ ಪ್ರತಿನಿತ್ಯವೂ ಕಂಡು ಬರುತ್ತಿದ್ದು ಇದರಿಂದ ಬೇಸತ್ತಿರುವ ಜನತೆ ಸಂಬಂಧಪಟ್ಟ ಇಲಾಖೆಗೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ.

ಪತ್ರಿಕೆಗಳಲ್ಲಿ ವರದಿ ಬಂದಾಗ ಎಚ್ಚೆತ್ತುಕೊಳ್ಳುವ ಸ್ಥಳೀಯ ನಗರಾಡಳಿತ ಸ್ಥಳಕ್ಕೆ ತೆರಳಿ ಮೇಲಿಂದ ಮೇಲೆಗೆ ಕಲ್ಲನ್ನು ಎತ್ತಿಡುವ ಕೆಲಸವನ್ನು ಮಾಡಿ ಬರುತ್ತಾರೆ.ಆದರೆ ಅವರು ಸರಿ ಮಾಡಿ ಬಂದ ಮಾರನೇ ದಿನವೇ ಪರಿಸ್ಥಿತಿ ಮುಂದಿನ ರೀತಿಯಲ್ಲಿ ಇರುತ್ತದೆ. ಇದಕ್ಕೆ ಶಾಶ್ವತವಾದ ಕೆಲಸ ಕಾರ್ಯಗಳು ಇಲ್ಲಿ ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರಿ ಕೊಳ್ಳುತ್ತಿದ್ದಾರೆ.