ಸತತವಾಗಿ ಮೂರು ಘಂಟೆಗಳ ಕಾಲ ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸಲು ಹರ ಸಾಹಸ
ವಿವಿಧ ಉಪಕರಣ ಸೇರಿದಂತೆ ಕೆಲವು ದಾಖಲೆ ಪತ್ರ ಬೆಂಕಿಗೆ ಅಹುತಿ

ಅರಂತೋಡು ಗ್ರಾಮ ಪಂಚಾಯತ್ ನ ಘನತ್ಯಾಜ್ಯ ಘಟಕ್ಕೆ ಬೆಂಕಿ ಸತತವಾಗಿ 3 ಗಂಟೆಗೂ ಹೆಚ್ಚು ಕಾಲದಿಂದ ಹೊತ್ತಿ ಉರಿಯುತಿದ್ದು ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರ ಸಾಹಸ ಪಟ್ಟರು. ಅಂತಿಮವಾಗಿ ಇದೀಗ ಬಂದ ಮಾಹಿತಿ ಯಂತೆ ಬೆಂಕಿ ಅಲ್ಪ ಮಟ್ಟಿಗೆ ಹತೋಟಿಗೆ ಬಂದಿದೆ ಎಂದು ತಿಳಿದು ಬಂದಿದೆ.
















ಆದರೆ ಬೆಂಕಿಯ ಕೆನ್ನಾಲಿ ಗೆಗೆ ಶೆಡ್ ನಲ್ಲಿ ಇರಿಸ ಲಾಗಿದ್ದ ವಾಹನ ಸರ್ವಿಸ್ ಮೆಷಿನ್, ತ್ಯಾಜ್ಯ ಪಂಚ್ಚಿಂಗ್ ಮೆಷಿನ್ ಮತ್ತು ಬೇರೆ ಬೇರೆ ಧಾಖಲೆ ಪತ್ರಗಳು ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.

ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಸ್ಥಳೀಯ ಪರಿಸರದಿಂದೆಲ್ಲಾ ನೀರನ್ನು ತರಲು ಹರ ಸಾಹಸ ಪಟ್ಟಿ ರುವ ಬಗ್ಗೆ ಮತ್ತು ಸ್ಥಳೀಯ ನೂರಾರು ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡರು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ರೀತಿ ಆಗಿರಬಹುದೆಂದು ಅಂದಾಜಿಸಲಾಗಿದೆ.










