
ಕೆವಿಜಿ ಐಪಿಎಸ್ ನ ಕಿಂಡರ್ ಗಾರ್ಡನ್ ವಿಭಾಗದ ಮಕ್ಕಳಿಗೆ ರೇನ್ಬೋ ಡೇ ಕಾಮನಬಿಲ್ಲಿನ ದಿನಾಚರಣೆಯನ್ನು ಜು. 10ರಂದು
ಆಚರಿಸಲಾಯಿತು. ವಿದ್ಯಾರ್ಥಿಗಳು ಕಾಮನಬಿಲ್ಲಿನ ಬಗ್ಗೆ ಮಾತನಾಡಿದರು. ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ನಿಮ್ಮೆಲ್ಲರ ಬದುಕು ಕಾಮನಬಿಲ್ಲಿನ ಹಾಗೆ ವರ್ಣ ರಂಜಿತವಾಗಿರಲಿ ಎಂದು ಹಾರೈಸಿದರು.















ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಶಿಕ್ಷಕರ ಹಾಗೂ ಪೋಷಕರ ಶ್ರಮವನ್ನು ಕೊಂಡಾಡಿದರು. ಹೇಮಾ ವೈಲಾಯ ಪಾಠದ ಜೊತೆಗೆ ಮಕ್ಕಳಿಗೆ ಇಂತಹ ಆಚರಣೆಗಳು ಬಹು ಮುಖ್ಯ ಇದರಿಂದ ಮಕ್ಕಳ ಮನಸ್ಸು ವಿಕಾಸಗೊಳ್ಳತ್ತದೆ ಎಂದರು. ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ಶಿಕ್ಷಕ, ಶಿಕ್ಷಕೇತರ ಉಪಸ್ಥಿತರಿದ್ದರು.
ಶಿಕ್ಷಕಿ ಸುನಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸ್ನೇಹ ವಂದಿಸಿದರು.










