ನಿವೃತ್ತ ಶಿಕ್ಷಕರಾದ ಉಮೇಶ್ ಮಾಸ್ತರ್ ಪಲ್ಲತ್ತಡ್ಕ ಮತ್ತು ಶ್ರೀಮತಿ ನೀಲಮ್ಮ ಅಚ್ರಪ್ಪಾಡಿಯವರಿಗೆ ಗುರುವಂದನೆ















ಐವರ್ನಾಡು ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಜು.10 ರಂದು ಗುರುಪೂರ್ಣಿಮೆಯ ಪ್ರಯುಕ್ತ ಗುರುವಂದನೆ ಕಾರ್ಯಕ್ರಮ ನಡೆಯಿತು.

ನಿವೃತ್ತ ಶಿಕ್ಷಕ
ಉಮೇಶ್ ಮಾಸ್ತರ್ ಪಲ್ಲತ್ತಡ್ಕ ಮತ್ತು ನಿವೃತ್ತ ಶಿಕ್ಷಕಿ ಶ್ರೀಮತಿ ನೀಲಮ್ಮ ಅಚ್ರಪ್ಪಾಡಿಯವರಿಗೆ ಅವರ ಮನೆಯಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಐವರ್ನಾಡು ಶಕ್ತಿ ಕೇಂದ್ರದ ಅಧ್ಯಕ್ಷ ನಂದಕುಮಾರ್ ಬಾರೆತ್ತಡ್ಕ, ಬೆಳ್ಳಾರೆ ಬಿಜೆಪಿ ಮಹಾ ಶಕ್ತಿ ಕೇಂದ್ರದ ಸದಸ್ಯರಾದ ಕಿಶನ್ ಜಬಳೆ,ಐವರ್ನಾಡು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ದಾಸಪ್ಪ ಗೌಡ ಕೋಡ್ತಿಲು, ತಾ. ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ನಿಖಿಲ್ ಮಡ್ತಿಲ , ನಿವೃತ್ತ ಸೈನಿಕ ಗಣೇಶ್ ಬಜಂತ್ತಡ್ಕ, ಬಿಜೆಪಿ ದೇರಾಜೆ ಬೂತ್ ಅಧ್ಯಕ್ಷ ರಕ್ಷಿತ್ ಸಾರಕೂಟೇಲು,ಚೇತನ್ ಪಲ್ಲತ್ತಡ್ಕ,
ಅನಿಲ್ ದೇರಾಜೆ ,
ಮೋಹನ್ ಬೋಳುಗುಡ್ಡೆ, ಸತ್ಯನಾರಾಯಣ ಅಚ್ರಪ್ಪಾಡಿ, ಪ್ರಜ್ಞಾ ಎಸ್ ನಾರಾಯಣ್ ಅಚ್ರಪ್ಪಾಡಿ ಉಪಸ್ಥಿತರಿದ್ದರು.










