ಅಧ್ಯಕ್ಷರಾಗಿ ಸವಿತ ಬಸ್ತಿಗುಡ್ಡೆ, ಕಾರ್ಯದರ್ಶಿಯಾಗಿ ಕಮಲ ಕುರುಂಬುಡೇಲು
ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ ಪ್ರವರ್ತಿತ ಬೆಳ್ಳಾರೆಯ ಪಡ್ಪು ಶ್ರೀರಕ್ಷಾ ಸ್ವಸಹಾಯ ಸಂಘದ 24ನೇ ವರ್ಷದ ಮಹಾಸಭೆ ಪನ್ನೆ ಶೋಭನಾರ ಮನೆ ವಠಾರದಲ್ಲಿ ನಡೆಯಿತು.















ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಪುಷ್ಪಾವತಿ ಕುರುಂಬುಡೇಲು ವಹಿಸಿ ಲೆಕ್ಕಪತ್ರವನ್ನು ಮಂಡಿಸಿದರು. ಸಂಘದ ಕಾರ್ಯದರ್ಶಿ ತುಳಸಿ ಕಿಲಂಗೋಡಿ ವಾರ್ಷಿಕ ವರದಿ ಮಂಡಿಸಿದರು. ಮುಖ್ಯ ಅತಿಥಿಯಾಗಿ ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ, ಸುಳ್ಯದ ಸಂತ ಜೋಸೆಫ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಕುರುಂಬುಡೇಲು ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.
2025 -26 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಸವಿತ ಬಸ್ತಿಗುಡ್ಡೆ, ಕಾರ್ಯದರ್ಶಿಯಾಗಿ ಕಮಲ ಕುರುಂಬುಡೇಲು ಆಯ್ಕೆಯಾದರು. ಸದಸ್ಯರಾದ ಪೂರ್ಣಿಮಾ ಪಡ್ಪು ಸ್ವಾಗತಿಸಿ, ಕುಸುಮ ಕುರುಂಬುಡೇಲು ವಂದಿಸಿದರು. ಮೀನಾಕ್ಷಿ ಪನ್ನೆ ಕಾರ್ಯಕ್ರಮ ನಿರೂಪಿಸಿದರು . ಸ್ವಸಹಾಯ ಸಂಘದ ಸದಸ್ಯರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.










