ಜಾನಿ ಕೆ.ಪಿ.ಯವರಿಂದ ರಾಜ್ಯ ಇಎಸ್‌ಐ ಕಮಿಷನರ್ ಬಳಿ ಪರಿಹಾರಕ್ಕಾಗಿ ಒತ್ತಾಯ- ಕೂಡಲೇ ಪರಿಹರಿಸುವುದಾಗಿ ಭರವಸೆ
















ಸುಳ್ಯ ಸೇರಿದಂತೆ ಈಎಸ್‌ಐ ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ತಲೆದೋರಿರುವ ಬಗ್ಗೆ ಸುಳ್ಯದ ಸುದ್ದಿ ಪತ್ರಿಕೆಯ ಹರೀಶ್ ಬಂಟ್ವಾಳ್ ಹಾಗೂ ಸುಳ್ಯ ಈಎಸ್‌ಐ ಕ್ಲಿನಿಕ್‌ನ ವೈದ್ಯರು ಇತ್ತೀಚೆಗೆ ಕ್ಲಿನಿಕ್ ಗೆ ಔಷಧಿ ಸರಬರಾಜು ನಿಲುಗಡೆಯಾಗಿರುವ ವಿಷಯದ ಬಗ್ಗೆ ಜಾನಿ ಕೆ.ಪಿ.ಯವರ ಗಮನಕ್ಕೆ ತಂದಿದ್ದು, ಈ ವಿಷಯದಲ್ಲಿನ ಸಮಸ್ಯೆಯ ಬಗ್ಗೆ ಬೆಂಗಳೂರಿನಲ್ಲಿ ನೂತನವಾಗಿ ಈಎಸ್‌ಐ ಕಮಿಷನರ್ ಆಗಿ ನೇಮಕಗೊಂಡಿರುವ ಹಿರಿಯ ಐಎಎಸ್ ಅಧಿಕಾರಿ ಗೋಪಾಲಕೃಷ್ಣ ಅವರ ಬಳಿ ಚರ್ಚೆ ನಡೆಸಿದಾಗ ಇದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಧ್ಯೆಯ ಕೆಲವು ಕಾನೂನಿನ ಗೊಂದಲಗಳ ಕಾರಣಕ್ಕಾಗಿ ಸೃಷ್ಟಿಯಾದ ಸಮಸ್ಯೆಯಾಗಿದ್ದು, ಎರಡು ವಾರದೊಳಗೆ ಸಮಸ್ಯೆ ಖಂಡಿತಾ ಪರಿಹರಿಸಲಾಗುವುದು ಮತ್ತು ಸುಳ್ಯದ ವಿಷಯ ವಿಶೇಷವಾಗಿ ಪರಿಗಣಿಸುತ್ತೇನೆ ಎಂದು ಗೋಪಾಲಕೃಷ್ಣ ಅವರು ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸದಸ್ಯರಾದ ಜಾನಿ.ಕೆ.ಪಿ ತಿಳಿಸಿದ್ದಾರೆ.










