ಅಡ್ಡಬೈಲು – ಬೀದಿಗುಡ್ಡೆ – ಎಣ್ಣೆಮಜಲು ಮಾರ್ಗವಾಗಿ ಬಸ್ ಸಂಚರಿಸಲು ಮನವಿ

0

ಬೆಳಗ್ಗಿನ ಸಮಯ ಪoಬೆತ್ತಾಡಿಯಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಬಸ್ಸು ನೇರವಾಗಿ ಬಳ್ಪ ಸುಬ್ರಹ್ಮಣ್ಯ ಹೋಗುವ ಬದಲು
.ಅಡ್ಡಬೈಲು – ಬೀದಿಗುಡ್ಡೆ – ಎಣ್ಣೆಮಜಲು ಮಾರ್ಗವಾಗಿ ಬಸ್ ಸಂಚರಿಸಲು ಮನವಿ ಸಲ್ಲಿಸಲಾಗಿದೆ.

ಶಾಲಾ, ಕಾಲೇಜು ಮಕ್ಕಳ ಅನುಕೂಲಕ್ಕಾಗಿ ಅಡ್ಡಬೈಲು – ಬೀದಿಗುಡ್ಡೆ – ಎಣ್ಣೆ ಮಜಲು ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳುವಂತೆ ಕೆ .ಎಸ್.ಆರ್.ಟಿ ಸಿ ಪುತ್ತೂರು ವಿಭಾಗ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಅಕ್ಕೇಣಿ, ಶೈಲಜಾ ಸದಾಶಿವ, ನೇತ್ರಾವತಿ ಹೊಪ್ಪಾಳೆ, ದಿವಾಕರ, ಗೋಪಾಲ ಎಣ್ಣೆ ಮಜಲು, ಉಮೇಶ್ ಪೂಜಾರಿ, ಭಾಸ್ಕರ ಕೊರಪ್ಪಣೆ ಮತ್ತಿತರರು ಉಪಸ್ಥಿತರಿದ್ದರು.