ಸುಬ್ರಹ್ಮಣ್ಯದಲ್ಲಿ ಪರಿಸರ ಉಳಿಸಿ ಅಭಿಯಾನಕ್ಕೆ ಚಾಲನೆ

0

ಜಸ್ಟಿಸ್ ಕೆ ಎಸ್ ಹೆಗಡೆ ಚಾರಿಟೇಬಲ್ ಆಸ್ಪತ್ರೆ, ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ದೇರಳಕಟ್ಟೆ ಮಂಗಳೂರು ಇವರು ಸುಬ್ರಹ್ಮಣ್ಯದ ಸದಾನಂದ ವೈದ್ಯಕೀಯ ಮತ್ತು ದಂತ ಆರೋಗ್ಯ ಕೇಂದ್ರ, ಶ್ರೀ ಸುಬ್ರಹ್ಮಣ್ಯ ಮಠದ ವತಿಯಿಂದ ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ, ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್, ಅರಣ್ಯ ಇಲಾಖೆ,. ಇನ್ನರ್ ವೀಲ್ ಕ್ಲಬ್ ಇವುಗಳ ಜಂಟಿ ಆಶಯದಲ್ಲಿ ಜು‌11 ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆ ವಠಾರದಲ್ಲಿ ಗಿಡ ಬೆಳೆಸಿ ಪರಿಸರ ಉಳಿಸಿ ಅಭಿಯಾನವನ್ನು ಕೈಗೊಳ್ಳಲಾಯಿತು.

ಅಭಿಯಾನವನ್ನು ದೀಪ ಬೆಳಗಿಸಿ ಸುಬ್ರಮಣ್ಯ ಮಠದ ಶ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು
ಉದ್ಘಾಟಿಸಿದರು.


” ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ನಿಟ್ಟೆ ಕೆಎಸ್ ಹೆಗಡೆ ಯುನಿವರ್ಸಿಟಿಯ ವೈಸ್ ಚಾನ್ಸಲರ್ ಡಾl ಸತೀಶ್ ಭಂಡಾರಿ ಉಪಸ್ಥಿತರಿದ್ದರು. ನಿಟ್ಟೆ ರೂರಲ್ ಹೆಲ್ತ್ ಸೆಂಟರ್ ಕ್ಷೇಮದ ಸಂಯೋಜಕ ಡಾl ರಾಘವೇಂದ್ರ ಹುಚ್ಚಣ್ಣನವರ್ , ನಿಟ್ಟೆ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥೆ ಡಾ. ಹೌದ್ರಿ ಡಿ. ಕ್ರೂಸ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯ ಅಶೋಕ ನೆಕ್ರಾಜೆ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪ್ರೊಫೆಸರ್. ಕೆ ಆರ್. ಶೆಟ್ಟಿಗಾರ್, ಪೂರ್ವ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಡಾl ರವಿ ಕಕ್ಕೆಪದವು, ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನ ಗೋಪಾಲ ಎಣ್ಣೆ ಮಜಲ್, ರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ ನಾಯರ್, ಸದಾನಂದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿಕ್ರಂ ಶೆಟ್ಟಿ, ದಂತ ವೈದ್ಯ ಚರಣ್ ಶೆಟ್ಟಿ ಸದಾನಂದ ಆಸ್ಪತ್ರೆಯ ಸಿಬ್ಬಂದಿ ವರ್ಗದವರು,ಅರಣ್ಯ ಇಲಾಖೆ ಯವರು, ಸಾರ್ವಜನಿಕರು ಹಾಜರಿದ್ದರು. ಇನ್ನರ್ ವೀಲ್ ಕ್ಲಬ್ಬಿನ ವಿಮಲಾ ರಂಗಯ್ಯ ಸ್ವಾಗತಿಸಿ, ಸದಾನಂದ ಆಸ್ಪತ್ರೆ ಸಿಬ್ಬಂದಿ ಮೋಹನ ಪಳ್ಳಿಗದ್ದೆ ವಂದಿಸಿದರು.