
ಗುರುಪೂರ್ಣಿಮೆ ಪ್ರಯುಕ್ತ ಅಜ್ಜಾವರ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ನಿವೃತ್ತ ಶಿಕ್ಷಕರ ಮನೆಗೆ ತೆರಳಿ ಗುರುವಂದನಾ ಕಾರ್ಯಕ್ರಮ ಮಾಡಲಾಯಿತು.
















ನಿವೃತ್ತ ಶಿಕ್ಷಕರಾದ ಲೋಕಯ್ಯ ಮಾಸ್ಟರ್ ಅತ್ಯಾಡಿ ಮತ್ತು ಚಂದ್ರಾವತಿ ಲೋಕಯ್ಯ ಮಾಸ್ಟರ್ ದಂಪತಿಗಳನ್ನು ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಪದ್ಮನಾಭ ಮಾಸ್ಟರ್ ಇವರನ್ನ ಸನ್ಮಾನಿಸಿ ಗುರುವಂದನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹರೀಶ್ ಕಂಜಿಪಿಲಿ, ಸುಬೋಧ್ ಶೆಟ್ಟಿ, ಶ್ರೀಮತಿ ಪುಲಸ್ತ್ಯ ರೈ , ಆಶಾ ತಿಮ್ಮಪ್ಪ, ಚನಿಯ ಕಲ್ತಡ್ಕ, ಸಿ.ಎ. ಬ್ಯಾಂಕಿನ ಅಧ್ಯಕ್ಷರಾದ ವಿಕ್ರಂ ಅಡ್ಪಂಗಾಯ, ಶಂಕರ್ ಪೆರಾಜೆ, ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಶ್ ಮೇನಾಲ, ಬೂತ್ ಸಮಿತಿ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ, ಹಾಗೂ ಮಂಡಲ ಸಮಿತಿಯ ಸದಸ್ಯರಾದ ಜಯಂತಿ ಅಜ್ಜಾವರ, ಅಬ್ದುಲ್ ಕುಂಞಿ ನೆಲ್ಯಡ್ಕ ಉಪಸ್ಥಿತರಿದ್ದರು. ಕಿರಣ್ ರೈ ಮೇನಾಲ, ಕಿಟ್ಟಣ್ಣ ರೈ ಮೇನಾಲ, ಚಿದಾನಂದ ಪೂಜಾರಿ ಇರಂತಮಜಲು, ಪ್ರಬೋಧ್ ಶೆಟ್ಟಿ, ಸುನಿಲ್ ರೈ, ಹರಿಪ್ರಕಾಶ್ ಮುಳ್ಯ, ರಮೇಶ್ ದೊಡ್ಡೇರಿ, ಸುಕುಮಾರ್ ಕಲ್ಲಗುಡ್ಡೆ, ಲೋಕೇಶ್ ಮಾವಿನಪಲ್ಲ, ಗಿರಿದರ್ ನಾರಾಲು, ಕೆ.ಪಿ. ಸೀತಾರಾಮ್, ವಿಶಾಲಾಕ್ಷಿ ಅಜ್ಜಾವರ, ನಳಿನಾಕ್ಷಿ ಅಡ್ಪಂಗಾಯ ಮೊದಲಾದವರಿದ್ದರು.










