ಅಂಜನಾದ್ರಿ ಬೂತ್ ಸಮಿತಿಯ ವತಿಯಿಂದ ಗುರುವಂದನಾ ಕಾರ್ಯಕ್ರಮ

0

ಭಾರತೀಯ ಜನತಾಪಕ್ಷ ನೇತೃತ್ವದಲ್ಲಿ ಕೇಂದ್ರ ಸರಕಾರಕ್ಕೆ 11 ವರ್ಷ ಆಚರಣೆಯ ನೆನಪಿನ ಪ್ರಯುಕ್ತ “ವಿಕಸಿತ ಭಾರತ” ಹಾಗೂ “ಗುರುವಂದನಾ” ಕಾರ್ಯಕ್ರಮದ ಅಂಗವಾಗಿ ವಿನೋಬನಗರದ ನಿವೃತ್ತ ಶಿಕ್ಷಕ ಚಂದ್ರಶೇಖರ ದಂಪತಿಗಳನ್ನು ಅವರ ಮನೆಯಲ್ಲಿ ಅಂಜನಾದ್ರಿ ಬೂತ್ ಸಮಿತಿಯ ವತಿಯಿಂದ ಗೌರವಾರ್ಪಣೆ ಹಾಗೂ ಕಾಫಿ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಕಾಮತ್, ಶಕ್ತಿಕೇಂದ್ರ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್, ಗ್ರಾಮ ಪಂಚಾಯತ್ ಸದಸ್ಯೆ ಲೀಲಾವತಿ ವಿನೋಬನಗರ, ಬೂತ್ ಸಮಿತಿ ಅಧ್ಯಕ್ಷ ರವಿರಾಜ್ ಗಬ್ಬಲಡ್ಕ,ಕನಕಮಜಲು ಸಹಕಾರಿ ಸಂಘದ ಮಾಜಿ ನಿರ್ದೇಶಕ ಗಣೇಶ ಅಂಬಾಡಿಮೂಲೆ ಹಾಗೂ ಬೂತ್ ಸಮಿತಿಯ ವಿವಿಧ ಜವಾಬ್ದಾರಿಯ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.