ಗರುಡ ಯುವಕ ಮಂಡಲ ಆಶ್ರಯದಲ್ಲಿ ನೋಟ್ ಪುಸ್ತಕ ವಿತರಣೆ

0

ಜು.11ರಂದು ಗರುಡ ಯುವಕ ಮಂಡಲ ಚೊಕ್ಕಾಡಿ ಆಶ್ರಯದಲ್ಲಿ ಸ. ಉ. ಹಿ. ಪ್ರಾ. ಶಾಲೆ ಅಮರಪಡ್ನೂರಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಯಿತು.

ವಿತರಣಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೂಪವಾಣಿ , ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ಮುರಳಿ ನಳಿಯಾರು, ಗರುಡ ಯುವಕ ಮಂಡಲದ ನಿರ್ದೇಶಕರಾದ ಶರಣ್ ಕರ್ಮಜೆ ಮತ್ತು ತೇಜಸ್ ಕೊಳಂಬೆ, ಮತ್ತು ಶಾಲಾ ಎಲ್ಲಾ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.ನೋಟ್ ಪುಸ್ತಕ ದಾನಿಗಳಾಗಿ ಪ್ರಜ್ವಲ್ ಹೆಗ್ಡೆ ಸುಳ್ಯ, ಅಭಿಷೇಕ್ ಪಡ್ಪು, ಸ್ವಪ್ನಿತಾ ಬೆಳ್ಳಿಪ್ಪಾಡಿ, ಮುರಳಿ ನಳಿಯಾರು, ಸಹಕರಿಸಿದರು.