ಮಳೆಗೆ ತೋಡು ತುಂಬಿ ಹರಿಯುತ್ತಿದೆ..ಎಂದು ಭಾವಿಸಿದ್ದೀರಾ…?

0

ಇದು ನಗರ ವ್ಯಾಪ್ತಿಯ ಕಾಂಕ್ರೀಟ್ ರಸ್ತೆ‌ ನಂಬುತ್ತೀರಾ…!

ಸುಳ್ಯ ನಗರ ವ್ಯಾಪ್ತಿಯ ಸರಕಾರಿ ಆಸ್ಪತ್ರೆಯ ಬದಿಯಲ್ಲಿ ಶ್ರೀ ರಾಮ ಪೇಟೆಯಲ್ಲಿರುವ ರಿಕ್ಷಾ ನಿಲ್ದಾಣದ ಪಕ್ಕದ ಕಾಂಕ್ರೀಟ್ ರಸ್ತೆಯಲ್ಲಿ ಮಳೆಯ ನೀರು ಹರಿದು ಬರುತ್ತಿದ್ದು ತೋಡಿನಂತೆ ಭಾಸವಾಗುತ್ತಿದೆ.

ಜೂನಿಯರ್ ಕಾಲೇಜ್ ಸಂಪರ್ಕದ ರಸ್ತೆ ಯಾಗಿದ್ದು ಈ ಪ್ರದೇಶದಲ್ಲಿರುವ ಮನೆಗಳಿಗೆ ಹಾಗೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಇದೇ ರಸ್ತೆಯ ಮೂಲಕ ಹೋಗಬೇಕು. ಮೇಲ್ಭಾಗದಿಂದ ಡ್ರೈನೇಜ್ ಮೂಲಕ ಹರಿದು ಬರುವ ನೀರು ನೇರವಾಗಿ ಕಾಂಕ್ರೀಟ್ ರಸ್ತೆಯಲ್ಲಿಯೇ ಹರಿದು ಹೋಗುತ್ತಿದೆ. ಜೋರಾಗಿ ಮಳೆ ಬಂದಾಗ ನೀರಿನ ಪ್ರಮಾಣ ಹೆಚ್ಚು ಹರಿಯುವುದರಿಂದ ಸಣ್ಣ ಮಕ್ಕಳು ನಡೆದುಕೊಂಡು ಹೋದಲ್ಲಿ ನೀರಿನ ರಭಸಕ್ಕೆ ಸೆಳೆದುಕೊಂಡು ಹೋಗುವ ಸಾಧ್ಯತೆಯೂ ಇದೆ. ವಾಹನ ಸವಾರರಿಗೆ ಮಾತ್ರವಲ್ಲದೆ ಈ ರಸ್ತೆಯ ಮೂಲಕ ನಡೆದುಕೊಂಡು ಹೋಗುವವರಿಗಂತೂ ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುವುದು. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು,ಅಧಿಕಾರಿಗಳು ಗಮನಹರಿಸಿ ಸೂಕ್ತ ಪರಿಹಾರದ ವ್ಯವಸ್ಥೆಕಲ್ಪಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.