ಬಾಳಿಲ ವಿದ್ಯಾಬೋಧೀನೀ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾಪ್ರದರ್ಶನ

0

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಜು. 11ರಂದು ನೆರವೇರಿತು. ವಿದ್ಯಾರ್ಥಿ ಜೀವನದಲ್ಲಿ ಬದುಕು ಕ್ರಿಯಾತ್ಮಕವಾಗಿರಬೇಕು. ತಮ್ಮಲ್ಲಿರುವ ಪ್ರತಿಭೆ ಇಮ್ಮಡಿಗೊಳಿಸಲು ಶಾಲೆಗಳಲ್ಲಿ ಅವಕಾಶಗಳಿರಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರುವಂತ ಕಾರ್ಯವೇ ಪ್ರತಿಭಾ ಪ್ರದರ್ಶನ. ಪ್ರತಿಭಾ ಪ್ರದರ್ಶನದಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಪಠ್ಯಧಾರಿತ ಶಿಕ್ಷಣದಿಂದ ಮಾತ್ರ ಬದುಕಿನ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ, ಬದಲಾಗಿ ಬಾಲ್ಯದಿಂದಲೇ ಬೆಳೆಸಿಕೊಳ್ಳುವ ಉತ್ತಮ ಗುಣಗಳು ಅವನನ್ನು ಉತ್ತುಂಗಕ್ಕೇರಿಸುತ್ತವೆ ಎಂದು ಹಿರಿಯರು ಹೇಳಿದ್ದಾರೆ.

ಪ್ರತಿ ವರ್ಷದಂತೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ನಾಲ್ಕು ದಳಗಳಾದ, ಜ್ಯೋತಿ, ಶಕ್ತಿ, ಕೀರ್ತಿ, ಸ್ಫೂರ್ತಿ ಈ ಪ್ರಕಾರವಾಗಿ ಇಂದು ಅರ್ಧ ಗಂಟೆಯ ಅವಕಾಶವನ್ನು ನೀಡಲಾಯಿತು. ಅದರಲ್ಲಿ ವಿದ್ಯಾರ್ಥಿಗಳು ಯೋಗಾಸನ, ಭಾಷಣಗಳು, ಹಾಡು, ರಿಮಿಕ್ಸ್ ಡ್ಯಾನ್ಸ್, ಜಾನಪದ ನೃತ್ಯ, ಮಿಮಿಕ್ರಿ, ಕಂಸಾಳೆ, ಚದ್ಮವೇಷ, ನೃತ್ಯ, ಕವನ ವಾಚನ, ಜಾನಪದ ನೃತ್ಯ , ಕವ್ವಾಲಿ, ಸಂಸ್ಕೃತ ಧಾರ್ಮಿಕ ಪಠಣ, ಅರೇಬಿಕ್ ಧಾರ್ಮಿಕ ಪಠಣ, ಭರತನಾಟ್ಯ, ಸ್ಕಿಟ್ ಹೀಗೆ ಹಲವು ವಿಧದ ಕಾರ್ಯಕ್ರಮಗಳನ್ನು ನೀಡಿದರು. ನಾಲ್ಕು ದಳಗಳಿಂದ ಉತ್ತಮವಾದ ಕಾರ್ಯಕ್ರಮಗಳು ಹೊರಬಂದು ಬಂದವು. ನಿರ್ಣಾಯಕರಾಗಿ ಸಹಶಿಕ್ಷಕರುಗಳಾದ ಲೋಕೇಶ್ ಬಿ, ವೆಂಕಟೇಶ್ ಕುಮಾರ್ ಯು, ಶಿವಪ್ರಸಾದ್ ಜಿ, ನಿರ್ವಹಿಸಿದರು. ಮುಖ್ಯಶಿಕ್ಷಕರಾದ ಉದಯಕುಮಾರ್ ರೈ ಎಸ್ ಕಾರ್ಯಕ್ರಮ ನೀಡಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಕಾರ್ಯಕ್ರಮದ ಒಟ್ಟು ನಿರ್ವಹಣೆಯನ್ನು ಅರವಿಂದ ಕಾಯಾರ ಮತ್ತು ಹರಿಪ್ರಸಾದ ರೈ ಜಿ ವಹಿಸಿದ್ದರು. ಉತ್ತಮ ಕಾರ್ಯಕ್ರಮ ನೀಡಿದ ಕೀರ್ತಿ ತಂಡಕ್ಕೆ ರೋಲಿಂಗ್ ಟ್ರೋಫಿ ಮತ್ತು ಬಹುಮಾನವನ್ನು ನೀಡಲಾಯಿತು. ಉಳಿದ ಮೂರು ದಳಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.