














ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ
ವಲಯ ಅರಣ್ಯ ಅಧಿಕಾರಿಗಳಾಗಿ ಭಡ್ತಿಗೊಂಡ ಸಂತೋಷ್ ಕುಮಾರ್ ರೈ ಯವರಿಗೆ ಮತ್ತು ಶ್ರವಣ ಸ್ವರ ಪ್ರಶಸ್ತಿ ಪಡೆದ ಕು। ರಚನಾ ಚಿದ್ಗಲ್ ಇವರಿಗೆ ಗೌರವಾರ್ಪಣೆ ಶ್ರೀ ದುರ್ಗಾಪೂಜೆ
ಜು. 18 ರಂದು ಸಂಜೆ ಗಂಟೆ 5.00ಕ್ಕೆ ಪಂಜ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಕೇಂದ್ರ ಸಭಾಭವನದಲ್ಲಿ ನಡೆಯಲಿದೆ. ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಪುತ್ಯ ಸಭಾಧ್ಯಕ್ಷತೆ ವಹಿಸಲಿದ್ದಾರೆ. , ಮಂಗಳೂರು ಸಂಚಾರಿ ದಳ ,ವಲಯ ಅರಣ್ಯ ಅಧಿಕಾರಿ ಸಂತೋಷ ರೈ ,ಶ್ರವಣ ಸ್ವರ’ ಪ್ರಶಸ್ತಿ ವಿಜೇತೆ ಭಾಗವತರು
ಕು। ರಚನಾ ಚಿದ್ಗಲ್ ಗೌರವಾರ್ಪಣೆ ಸ್ವೀಕರಿಸಲಿದ್ದಾರೆ. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಪದ್ಮನಾಭ ಬಿಳಿಮಲೆ ಅಭಿನಂದನ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಡಾ. ದೇವಿಪ್ರಸಾದ್ ಕಾನತ್ತೂರ್ ,
ನ್ಯಾಯವಾದಿ ದಿಲೀಪ್ ಬಾಬ್ಲುಬೆಟ್ಟು ಹಾಗೂ ಪುತ್ತೂರು ತಾಲೂಕು ಯಕ್ಷಪಟ್ಲ ಸಂಚಾಲಕ ಪ್ರಶಾಂತ ರೈ ಪಲ್ಲೋಡಿ,
ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು ಉಪಸ್ಥಿತರಿರುವರು.










