ಆಲೆಟ್ಟಿಯ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ,ಮೊಸರು ಕುಡಿಕೆ ಉತ್ಸವ ಸಮಿತಿಯ ಆಶ್ರಯದಲ್ಲಿ ಅ.17 ರಂದು ಆಲೆಟ್ಟಿ ಯಲ್ಲಿ ನಡೆಯಲಿರುವ
3 ನೇ ವರ್ಷದ ಆಲೆಟ್ಟಿ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆಯು
ಜು.13 ರಂದು ಸದಾಶಿವ ದೇವಸ್ಥಾನದಲ್ಲಿ ನಡೆಯಿತು.
















ಬೆಳಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ ರವರು ಪ್ರಾರ್ಥಿಸಿದರು.
ಬಳಿಕ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶ್ರೀಪತಿ ಬೈಪಡಿತ್ತಾಯ ರವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಆಲೆಟ್ಟಿ, ಪಂ.ಸದಸ್ಯ ಮುತ್ತಪ್ಪ ಪೂಜಾರಿ ಮೊರಂಗಲ್ಲು, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ನಿರ್ದೇಶಕ ಸುಧಾಕರ ಆಲೆಟ್ಟಿ,ಸೇ.ಸ.ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್ ಆಲೆಟ್ಟಿ, ಸುಂದರ ಆಲೆಟ್ಟಿ,
ರಾಮಚಂದ್ರ ಆಲೆಟ್ಟಿ, ಕೇಶವ ಮೊರಂಗಲ್ಲು, ಅವಿನ್ ಆಲೆಟ್ಟಿ, ನಿತಿನ್ ಗುಂಡ್ಯ, ನಾಗರಾಜ್ ಬಡ್ಡಡ್ಕ, ಹರಿಪ್ರಸಾದ್ ಗುಂಡ್ಯ, ಗೋಪಾಲ ಗುಂಡ್ಯ, ಶಿವಪ್ರಸಾದ್ ಆಲೆಟ್ಟಿ ಹಾಗೂ ಕ್ಲಬ್ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.ಕ್ಲಬ್ಬಿನ ಗೌರವಾಧ್ಯಕ್ಷ ಲತೀಶ್ ಗುಂಡ್ಯ ಸ್ವಾಗತಿಸಿ, ವಂದಿಸಿದರು.










