
ಗುತ್ತಿಗಾರು ಗ್ರಾಮದ ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿ ಮಣಿಯಾನ, ಪೈಕ ಇದರ ಜೀರ್ಣೋದ್ಧಾರ ಮತ್ತು ಪುನರ್ ಪ್ರತಿಷ್ಠಾ ಕಲಶೋತ್ಸವ ಕಾರ್ಯ ಕ್ರಮದ ಜಮಾ ಖರ್ಚು ಮಂಜೂರಾತಿ ಸಭೆ ಜು.13 ರಂದು ನಡೆಯಿತು.
















ಅನುವಂಶೀಯ ಅಧ್ಯಕ್ಷರಾದ ಮಣಿಯಾನ ಪುರುಷೋತ್ತಮ ಇವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರದ ಕಛೇರಿ ಕಟ್ಟಡದಲ್ಲಿ ಸಭೆ ನಡೆಯಿತು.
ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಮಣಿಯಾನ ಸುಬ್ಬಣ್ಣ ಗೌಡ, ಸೇವಾ ಟ್ರಸ್ಟ್ ನ ಕಾರ್ಯದರ್ಶಿಯಾದ ಪಿ.ಆರ್ ಕಿಶೋರ್ ಕುಮಾರ್ ಬೊಮ್ಮದೇರೆ, ಜತೆ ಕಾರ್ಯದರ್ಶಿ ಜಗದೀಶ್ ಪೈಕ, ಚಿತ್ತಡ್ಕ ಲಿಂಗಪ್ಪ ಗೌಡ, ಸದಸ್ಯರಾದ ಮಣಿಯಾನ ಹರಿಶ್ಚಂದ್ರ ಗೌಡ, ಡಿ. ಎಂ. ರಾಮಣ್ಣ ಗೌಡ ದೇರಾಜೆ, ಜೀರ್ಣೋದ್ಧಾರ ಸಮಿತಿಯ ಜತೆ ಕಾರ್ಯ ದರ್ಶಿ ಮುಚ್ಚಾರ ಚಿನ್ನಪ್ಪ ಗೌಡ, ಕೋಶಾಧಿಕಾರಿ ಮಾಧವ ಮಾಸ್ತರ್ ಮೂಕಮಲೆ ವೇದಿಕೆಯಲ್ಲಿದ್ದರು.
ಸಭೆಯಲ್ಲಿ 14/06/2018 ರಿಂದ 20/01/2025 ರವರೆಗಿನ ಜಮೆ ಖರ್ಚುಗಳನ್ನು ಸಭೆಯಲ್ಲಿ ವಿವರವಾಗಿ ಓದಲಾಯಿತು. ರೂ.
14,10,116.00 ಒಟ್ಟು ಜಮೆಯಾಗಿದ್ದು, ರೂ 28,89,817.00 ಖರ್ಚಾಗಿರುತ್ತದೆ ಎಂದು ಸಭೆ ತಿಳಿಸಲಾಯಿತು.
ಮಣಿಯಾನ ಪುರುಷೋತ್ತಮ ರವರು ಭರಿಸಿದ ಹೆಚ್ಚುವರಿ ಖರ್ಚಿನ ಮೊತ್ತ ರೂ.=14,79,701.00
ಜಮಾ ಖರ್ಚನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಸಭೆಯಲ್ಲಿ ಜಮಾ ಖರ್ಚನ್ನು ಸಿದ್ದಪಡಿಸಿ ಮಂಡಿಸಿದ ಮುಚ್ಚಾರ ಚಿನ್ನಪ್ಪ ಗೌಡ ರವರನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮಣಿಯಾನ ಸುಬ್ಬಣ್ಣ ಗೌಡ ರವರು ಶಾಲು ಹೊದಿಸಿ,ಹಾರ ಹಾಕಿ ಫಲ ಪುಷ್ಪ ಹಾಗೂ ಶ್ರೀ ಶಂಖಚೂಡ ದೇವರ ಪೋಟೋ ನೀಡಿ ಗೌರವಿಸಿ, ಸನ್ಮಾನಿಸಲಾಯಿತು.. ಸನ್ಮಾನಿತರ ಪರಿಚಯದೊಂದಿಗೆ ಅವರ ಪರಿಶ್ರಮ ಹಾಗೂ ಕಾರ್ಯ ವೈಖರಿಯ ಬಗ್ಗೆ ಪಿ ಆರ್ ಕಿಶೋರ್ ಕುಮಾರ್ ವಿವರಿಸಿದರು. ಪ್ರಾರಂಭದಲ್ಲಿ ಮಣಿಯಾನ ಪುರುಷೋತ್ತಮ ಸ್ವಾಗತಿಸಿ, ಶ ಜಗದೀಶ್ ಪೈಕ ವಂದನಾರ್ಪಣೆ ಮಾಡಿದರು.










