ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಯವರಿಗೆ ಗುರುವಂದನೆ

ಶಾಂತಿನಗರದ ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ 12 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ
ಸುಳ್ಯ ನಗರ ವ್ಯಾಪ್ತಿಯಲ್ಲಿ ಮನೆ ಮನೆ ಭಜನಾ ಕಾರ್ಯಕ್ರಮವನ್ನು
ಜು.13 ರಂದು ಹಮ್ಮಿಕೊಳ್ಳಲಾಯಿತು.















ದಾಸ ಸಾಹಿತ್ಯ ಸಂಕೀರ್ತನಾಕಾರರಾದ ರಾಮಕೃಷ್ಣ ಕಾಟುಕುಕ್ಕೆ ಯವರಮಾರ್ಗದರ್ಶನದಲ್ಲಿ ಮಹಿಳಾ ಭಜನಾ ತಂಡದ ಅಧ್ಯಕ್ಷೆ ಶ್ರೀಮತಿ ಹರ್ಷ ಕರುಣಾಕರ ಸೇರ್ಕಜೆ ಯವರ ನೇತೃತ್ವದಲ್ಲಿ ಆಯ್ದ 7 ಮನೆಗಳಿಗೆ ಭೇಟಿ ನೀಡಿ ಭಜನಾಸಂಕೀರ್ತನೆಯನ್ನು ನಡೆಸಿಕೊಟ್ಟರು.

ಸಂಜೆ ಕೇರ್ಪಳದ ಶ್ರೀಮತಿ ಚಂದ್ರಾವತಿ ಮತ್ತು ಮಹಾಬಲ ಕೆ ರವರ ಮನೆಯಲ್ಲಿ ನಡೆದ ಭಜನಾಕಾರ್ಯಕ್ರಮದಲ್ಲಿ ಹರಿದಾಸರಾದ ರಾಮಕೃಷ್ಣ ಕಾಟುಕುಕ್ಕೆ ಯವರಿಗೆ ಗುರುವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ
ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಹಿರಿಯ ಭಜಕರಾದ ವಿಶ್ವನಾಥ ನಾಯರ್, ಭಾಸ್ಕರ ನಾಯರ್, ಪ್ರಭಾಕರ ನಾಯರ್,ಕೃಷ್ಣ ರಾಜ್ ಕೇರ್ಪಳ,ಮನೆಯವರಾದ ಅನಿಲ್ ಕುಮಾರ್ ಕೇರ್ಪಳ,ಶ್ರೀಮತಿ ಸಂಧ್ಯಾ ಅನಿಲ್, ಶ್ರೀಮತಿ ಸುನಿತಾ ಮನೋಜ್ ಹಾಗೂ ಪರಿಸರದ ಮನೆಯವರು ಭಜನೆಯಲ್ಲಿ ಪಾಲ್ಗೊಂಡರು. ಹಾರ್ಮೋನಿಯಂ ನಲ್ಲಿ ವಿಜಯ್ ಆಚಾರ್ಯ ಮೇನಾಲ ಮತ್ತು ತಬಲಾ ದಲ್ಲಿ ಪ್ರಶಾಂತ್ ಸುಳ್ಯ ಸಹಕರಿಸಿದರು.
ಶ್ರೀಮತಿ ಹೇಮಾಗಣೇಶ್ ಕಜೆಗದ್ದೆ ಸ್ವಾಗತಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.










