ವಳಲಂಬೆ ಶಂಕರ ಭಟ್ ರವರ ಮನೆಯಲ್ಲಿ ಜು.13 ರ ರಾತ್ರಿ ನಾಗರ ಹಾವೊಂದು ಕಂಡು ಬಂದಿದ್ದು ಅರಣ್ಯ ಇಲಾಖೆಯ ಸಹಾಯದಿಂದ ಅದನ್ನು ಹಿಡಿದು ಕಾಡಿಗೆ ಬಿಡಲಾಯಿತು.















ಮನೆಯಲ್ಲಿ ಹಾವು ಇರುವುದರಿಂದ ಗಾಬರಿಗೊಂಡ ಮನೆಯವರು ಸ್ಥಳೀಯರಿಗೆ ತಿಳಿಸಿದ್ದು ಬಳಿಕ ಪಂಜ ಅರಣ್ಯ ಇಲಾಖೆಗೆ ತಿಳಿಸಲಾಯಿತು. ತಕ್ಷಣ ಸ್ಪಂದಿಸಿದ ಅವರು ಉರಗ ತಜ್ಞ ತಿಮ್ಮಪ್ಪ ಪಂಜ ರ ಮೂಲಕ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ , ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಮತ್ತಿತರರು ಸಹಕರಿಸಿದರು.










