ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದಲ್ಲಿನ.ಪಂ.ಮುಖ್ಯಾಧಿಕಾರಿ ಸುಧಾಕರ್ ರಿಗೆ ಬೀಳ್ಕೋಡುಗೆ ಸಮಾರಂಭ

0

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಐ.ಎಂ.ಎ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯ ನಗರ ಪಂಚಾಯತ್ ನಿಂದ ಇತ್ತೀಚೆಗೆ ಬಾಗಲಕೋಟೆ ಗೆ ವರ್ಗಾವಣೆಗೊಂಡ ಮುಖ್ಯಾಧಿಕಾರಿ ಸುಧಾಕರ್ ರವರಿಗೆ ಬೀಳ್ಕೋಡುಗೆ ಸಮಾರಂಭವು ಜು.15 ರಂದು ವರ್ತಕರ‌ ಸಮುದಾಯ ಭವನದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಯವರು ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಬೊಮ್ಮೆಟ್ಟಿ ಯವರು ಸುಳ್ಯ ನಗರ ಪಂಚಾಯತ್ ನಲ್ಲಿ ಕಳೆದ ಮೂರು ವರ್ಷಗಳಿಂದ ‌ಸೇವೆ ಸಲ್ಲಿಸಿ ಬಾಗಲಕೋಟೆಗೆ ವರ್ಗಾವಣೆಗೊಂಡ ಮುಖ್ಯಾಧಿಕಾರಿ ಸುಧಾಕರ್ ರವರನ್ನು ಸಂಘದ ಪರವಾಗಿ ಗೌರವಿಸಿ ಸನ್ಮಾನಿಸಿ ಬೀಳ್ಕೊಟ್ಟರು.
ಸರಕಾರಿ ಜೂನಿಯರ್ ಕಾಲೇಜ್ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ರವರು ಅಭಿನಂದನಾ ಭಾಷಣ ಮಾಡಿದರು.
ಐ.ಎಂ.ಎ ಅಧ್ಯಕ್ಷೆ ‌ಡಾ.ವೀಣಾ, ಪ್ರ.ಕಾರ್ಯದರ್ಶಿ ಡಿ.ಎಸ್.ಗಿರೀಶ್, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ರವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಮಧುಸೂದನ್ ಕುಂಭಕೋಡು, ಶ್ರೀಮತಿ ಲತಾ ಮಧುಸೂದನ್, ಉದ್ಯಮಿಸುಂದರ ರಾವ್ ಹಳೆಗೇಟು, ಉದ್ಯಮಿ ಇಬ್ರಾಹಿಂ ಕದಿಕಡ್ಕ,
ಜತ್ತಪ್ಪ ರೈ ಅರಂಬೂರು, ಜನಾರ್ದನ ನಾಯ್ಕ್ ಕೇರ್ಪಳ, ಡಾ.ವೀಣಾ, ಧರ್ಮಪಾಲ ಕುರುಂಜಿ, ಪ್ರಭಾಕರ ನಾಯರ್, ಉದ್ಯಮಿ ಸಾಂಗ್ ಸಿಂಗ್, ಸಂಘದ ಜತೆ ಕಾರ್ಯದರ್ಶಿ ಅಬ್ದುಲ್ ರಹೀಮ್ ಉಪಸ್ಥಿತರಿದ್ದರು.

ಸುಧಾಕರ ರೈ ಯವರು
ಪ್ರಾಸ್ತಾವಿಕ ಮಾತಿನೊಂದಿಗೆ ‌ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಿ.ಎಸ್.ಗಿರೀಶ್ ರವರು‌ ಕಾರ್ಯಕ್ರಮ ನಿರೂಪಿಸಿದರು.