ಕುಂಟಾರು-ಸುಳ್ಯ ನೂತನ ಬಸ್ಸು ಸಂಪರ್ಕ ಕಲ್ಪಿಸಿ : ಶಾಸಕರಿಗೆ ಮನವಿ

0

ಕುಂಟಾರು – ಸುಳ್ಯ ಬಸ್ ಸಂಚಾರ ಆರಂಭಿಸಬೇಕೆಂದು ತಾ.ಪಂ. ಮಾಜಿ ಅಧ್ಯಕ್ಷ ಶಂಕರ ಪೆರಾಜೆ, ಮಂಡೆಕೋಲು ಸಹಕಾರ ಸಂಘದ ನಿರ್ದೇಶಕ ಶಶಿಧರ್ ಕಲ್ಲಡ್ಕ ಶಾಸಕಿ ಭಾಗೀರಥಿ ಮುರುಳ್ಯ ರಿಗೆ ಮನವಿ ಸಲ್ಲಿಸಿದ್ದಾರೆ.

ಕುಂಟಾರು-ಸುಳ್ಯ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳು ದಿನನಿತ್ಯ ಶಾಲಾ ಕಾಲೇಜುಗಳಿಗೆ ಕುಂಟಾರಿನಿಂದ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸುಳ್ಯ ಸರಕಾರಿ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ದಿನಂಪ್ರತಿ ಅನಿವಾರ್ಯವಾಗಿ ಅಂತರಾಷ್ಟ್ರೀಯ ಬಸ್ಸನ್ನು ಅವಲಂಬಿಸಿ ಪ್ರಯಾಣಿಸುತ್ತಿದ್ದಾರೆ. ಪ್ರತಿನಿತ್ಯ ರೂಪಾಯಿ 56 ರಿಂದ ಮೇಲ್ಪಟ್ಟು ಪಾವತಿಸಿ ಪ್ರಯಾಣಿಸುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಕಷ್ಟಕರವಾಗಿತ್ತಿದೆ.

ಆದುದರಿಂದ ಕುಂಟಾರು-ಸುಳ್ಯ ಮಾರ್ಗವಾಗಿ ಮಂಡೆಕೋಲು ಗ್ರಾಮದ ಕಲ್ಲಡ್ಕ-ಪೆರಾಜೆ-ಅಕ್ಕಪ್ತಾಡಿ-ಕಾಯರ್ತೋಡಿ-ಕನ್ಯಾನ-ಮುರೂರು-ದೇವರಗುಂಡ-ಪೇರಾಲು-ಮೈತ್ತಡ್ಕ -ಕೇನಾಜೆ ಭಾಗಗಳಿಂದ ವಿದ್ಯಾರ್ಥಿಗಳಿದ್ದು ಈ ಭಾಗದ ರಸ್ತೆಯಲ್ಲಿ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲದಿರುವುದರಿಂದ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸರಕಾರಿ ಬಸ್ಸಿನ ವ್ಯವಸ್ಥೆಯನ್ನು ನೂತನವಾಗಿ ಒದಗಿಸಿಕೊಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ