ಪಂಜ: ಸಂಜೀವಿನಿ ಕಟ್ಟಡದಲ್ಲಿ ನೂತನ ಸಕ್ಷಮ್ ಕೇಂದ್ರ ಉದ್ಘಾಟನೆ

0

ಪಂಜದ ಪಂಚಮ ಸಂಜೀವಿನಿ ಗ್ರಾಮ ಪಂಚಾಯತ್‌ ಮಟ್ಟದ ಒಕ್ಕೂಟದ ಸಂಜೀವಿನಿ ಕಟ್ಟಡದಲ್ಲಿ ನೂತನ ಸಕ್ಷಮ್‌ ಕೇಂದ್ರ ಉದ್ಘಾಟನೆಗೊಂಡಿತು.

ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ದೇವಕಿಯವರು ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿಯವರು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಪಂಜ ಶಾಖೆಯ ಶಾಖಾ ವ್ಯವಸ್ಥಾಪಕ ಕನಕರಾಜ್ ಅವರು ಬ್ಯಾಂಕಿನಿಂದ ಸಂಘಗಳಿಗೆ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಹಾಗೂ ವಿಮೆಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತಿನಿಂದ ಆಗಮಿಸಿದ್ದ ಎನ್‌ ಆರ್‌ ಎಲ್‌ ಎಂ ನ ಜಿಲ್ಲಾ ವ್ಯವಸ್ಥಾಪಕಿ ಶ್ರೀಮತಿ ಶಕುಂತಲ ರವರು ಸಕ್ಷಮ್‌ ಕೇಂದ್ರದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಸಮುದಾಯಾಧಾರಿತ ಮರುಪಾವತಿ ಬಗ್ಗೆ ಮಾಹಿತಿ ನೀಡಿ ಸಿ.ಬಿ.ಆರ್.ಎಂ ಫೋರಂ ಎಂಬ ಸಮಿತಿಯನ್ನು ರಚನೆ ಮಾಡಿದರು.

ತಾಲೂಕು ವ್ಯವಸ್ಥಾಪಕಿ ( ಕೃಷಿಯೇತರ ) ಮೇರಿ ಎಸ್., ವಲಯ ಮೇಲ್ವಿಚಾರಕ ಅವಿನಾಶ್ ಡೆಲ್ಲಾರಿಯೋ, ವಲಯ ಮೇಲ್ವಿಚಾರಕಿ ( ಕೌಶಲ್ಯ ) ರೂಪ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಂಜ ಗ್ರಾಮ ಪಂಚಾಯತ್‌ ಸದಸ್ಯರು, ಪಂಚಮ ಸಂಜೀವಿನಿ ಗ್ರಾಮ ಪಂಚಾಯತ್‌ ಮಟ್ಟದ ಪದಾಧಿಕಾರಿಗಳು, ಎಂ.ಬಿ.ಕೆ., ಎಲ್.ಸಿ.ಆರ್.ಪಿ. ಯವರು, ಕೃಷಿ ಸಖಿ, ಪಶು ಸಖಿ, ಬಿ.ಸಿ. ಸಖಿ, ಎಫ್.ಎಲ್.ಸಿ.ಆರ್.ಪಿ., ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಜೀವಿನಿ ಸಂಘದ ಸದಸ್ಯರು ಹಾಜರಿದ್ದರು.