ಪಿಎಂಶ್ರೀ ಸ.ಮಾ. ಹಿ. ಪ್ರಾ. ಶಾಲೆ, ಸುಳ್ಯದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ಎಲ್.ಕೆ.ಜಿ ತರಗತಿ ಉದ್ಘಾಟನೆ

0

ಸುಳ್ಯದ ಮಾದರಿ ಶಾಲೆಯ ಪಿಎಂಶ್ರೀ ಶಾಲೆಯಾಗಿ ಆಯ್ಕೆಯಾಗಿದ್ದು, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಜು. 15 ರಂದು ಉದ್ಘಾಟನೆಗೊಂಡಿತು. ಇದರ ಜೊತೆಗೆ ನೂತನವಾಗಿ ಪ್ರಾರಂಭವಾಗುವ ಎಲ್.ಕೆ.ಜಿ ತರಗತಿಯನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದರೆ, ಉಪಾಧ್ಯಕ್ಷ ಬುದ್ಧನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ನಗರ ಪಂಚಾಯಿತಿ ಸದಸ್ಯರುಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಕೃಷ್ಣಪ್ಪ, ಸುಳ್ಯ ಮಾದರಿ ಶಾಲಾ ಡೆವಲಪ್ಮೆಂಟ್ ಸೊಸೈಟಿಯ ಅಧ್ಯಕ್ಷ ಎಂ.ಬಿ. ಸದಾಶಿವ, ಉಪಾಧ್ಯಕ್ಷ ಅಶೋಕ ಪ್ರಭು, ನಿವೃತ್ತ ಶಿಕ್ಷಕ ಶಿವರಾಮ ಕೇನಾಜೆ ಹಾಗೂ ಹಿರಿಯ ವಿದ್ಯಾರ್ಥಿಗಳು, ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ರವಿರಾಜ್ ಅಡ್ಕಾರ್, ಉಪಾಧ್ಯಕ್ಷೆ ಶ್ರೀಮತಿ ವಿಂದ್ಯಾಶ್ರೀ, ಎಸ್ ಡಿ ಎಂ ಸಿ ಸದಸ್ಯರುಗಳು, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದ ಶೆಟ್ಟಿ, ಶಾಲಾ ಶಿಕ್ಷಕರುಗಳಾದ ಶ್ರೀಮತಿ ಶೀಲಾವತಿ,ಪ್ರೇಮಾವತಿ, ಹೇಮಲತಾ, ಗೀತಾ ಕುಮಾರಿ, ಮಲ್ಲಿಕಾ, ಕೀರ್ತಿ, ಯಕ್ಷಿತ ಉಪಸ್ಥಿತರಿದ್ದರು .ಅತಿಥಿಗಳನ್ನು ಶಾಲಾ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ಟಿನೊಂದಿಗೆ ಸ್ವಾಗತಿಸಿದರು.

ಎಲ್ ಕೆ ಜಿ ಗೆ ದಾಖಲೆಗೊಂಡ ವಿದ್ಯಾರ್ಥಿಗಳಿಗೆ ಗ್ರೀನ್ ಹೀರೋ ಆಫ್ ಇಂಡಿಯಾ ಪ್ರಶಸ್ತಿ ಪಡೆದ ಆರ್ ಕೆ ನಾಯರ್ ಕೊಡ ಮಾಡುವ ಕೊಡೆ ಹಾಗೂ ಪೆನ್ಸಿಲ್ ಬಾಕ್ಸನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಓದುವ ಪುಸ್ತಕವನ್ನು ಅಶೋಕ ಪ್ರಭುಗಳು ಕೊಡ ಮಾಡಿದರು. ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.