ಆಲೆಟ್ಟಿ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ

0

ಸಾರ್ವತ್ರಿಕ ಸಮಸ್ಯೆಗಳು ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿರುವುದು ತಿಳಿದು ಬಂದಿದೆ.ಬಿ.ಎಸ್.ಎನ್.ಎಲ್ ನೆಟ್ ವರ್ಕ್ ಸಮಸ್ಯೆ ಸೀರಿಯಸ್ ಸಮಸ್ಯೆ ಎಂಬುದುಮನವರಿಕೆಯಾಗಿದೆ. ಬಯಲು ಸೀಮೆಗೆ ಹೋಲಿಸಿದಂತೆ ಮಲೆನಾಡು ಪ್ರದೇಶದಲ್ಲಿ ಟವರ್ ಗಳು ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಇದರಿಂದ ಈ ಭಾಗದಲ್ಲಿ ತೊಂದರೆಅನುಭವಿಸುವಂತಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ನನ್ನ ಒಬ್ಬನ ಪ್ರಯತ್ನ ಖಂಡಿತ ಸಾಕಾಗುವುದಿಲ್ಲ. ಟೆಕ್ನಿಕಲ್ ವಿಷಯದ ಕುರಿತು ತಿಂಗಳಿಗೆ ಎರಡು ಬಾರಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದೇನೆ. ಹೊಸ ಟವರ್ ನಿರ್ಮಾಣಕ್ಕೆ ಈಗಾಗಲೇ ಒತ್ತುಕೊಡಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ರವರು ಹೇಳಿದರು.

ಅವರು ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ಆಲೆಟ್ಟಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಉತ್ತರಿಸಿದರು.

ಗ್ರಾಮೀಣ ಭಾಗದ ಸಂಪರ್ಕದ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಶಾಸಕರು ವಿಧಾನ ಸಭೆಯಲ್ಲಿ ಆಗ್ರಹಿಸಬೇಕು. ಆಲೆಟ್ಟಿಯ ಬಡ್ಡಡ್ಕ ಕೂರ್ನಡ್ಕ ಮುಖ್ಯ
ರಸ್ತೆ ಅಭಿವೃದ್ಧಿಗೆ ಸಿ.ಆರ್.ಎಫ್ ನಿಂದ ಈ ಅವಧಿಯಲ್ಲಿ ಅನುದಾನ ಬಿಡುಗಡೆ ಮಾಡಿಸುತ್ತೇನೆ.
ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆ ಇರುವ ಬಗ್ಗೆ ಸ್ಥಳೀಯ ನಗರ ಪಂಚಾಯತ್ ಆಡಳಿತ ದವರು ಮುತುವರ್ಜಿ ವಹಿಸಬೇಕು. ಅರಣ್ಯ ಮತ್ತು ‌ಕಂದಾಯ ಇಲಾಖೆಯ ಜಂಟಿ ಸರ್ವೆ ನಡೆಸುವ ಕುರಿತು ಈಗಾಗಲೇ ಉಲ್ಲೇಖಿಸಲಾಗಿದೆ. ತಮಿಳು ಕಾರ್ಮಿಕರ ವಿಚಾರವಾಗಿ ಅಧ್ಯಯನ ನಡೆಸಿ ಮುಂದಿನ ದಿನಗಳಲ್ಲಿ ಕಾರ್ಯ ಕೈಗೆತ್ತಿಕೊಂಡು ನಿವೇಶನ ಮತ್ತು ವಸತಿ ವ್ಯವಸ್ಥೆ ಹೇಗೆ ಕಲ್ಪಿಸಬಹುದೆಂಬ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ‌ಬರಲಾಗುವುದು.
ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ ಮಾಡದೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ, ಆರೋಗ್ಯ ಮತ್ತು ಶಿಕ್ಷಣದ ವ್ಯವಸ್ಥೆಗೆ ಪೂರಕವಾದ ನಾದುರಸ್ತಿಯಲ್ಲಿರುವ ಶಾಲೆಗಳ ಕಟ್ಟಡ ನಿರ್ಮಾಣ ಕಾರ್ಯಗಳು ನಿರ್ವಹಿಸಲಾಗಿಲ್ಲ.
ಕೇಂದ್ರ ಸರಕಾರದ ಸಡಕ್ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಈಗಾಗಲೇ ಪತ್ರ ಬರೆಯಲಾಗಿದೆ.
ಮಾಣಿ ಸಂಪಾಜೆ ಹೆದ್ದಾರಿ ಚತುಷ್ಪತ ರಸ್ತೆಯ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ.
ಆಲೆಟ್ಟಿ ಗ್ರಾಮಕ್ಕೆ ಸಂಸದ ನಾಗಿ ಪ್ರಥಮ ಬಾರಿಗೆ ಬಂದಿದ್ದೇನೆ.ಮುಖ ಪರಿಚಯ ಇಲ್ಲದ ವ್ಯಕ್ತಿಯನ್ನು ಪಕ್ಷದ ಮೇಲಿನಅಭಿಮಾನದಿಂದ ಕಾರ್ಯಕರ್ತರು ಶ್ರಮವಹಿಸಿ ಗೆಲ್ಲಿಸಿಕೊಟ್ಡಿದ್ದೀರಿ. ನಿಮಗೆ ಪ್ರಶ್ನಿಸುವ ಹಕ್ಕಿದೆ. ಪ್ರಶ್ನೆಗೆ ಉತ್ತರ ನೀಡುವ ಹಾಗೂ ಸೇವೆ ಮಾಡುವ ಜವಬ್ದಾರಿ ನನ್ನದು. ನಿವೃತ್ತ ಸೈನಿಕನಾಗಿ ಪ್ರಾಮಾಣಿಕ ಕೆಲಸ ಮಾಡುವುದರೊಂದಿಗೆ ಕಾರ್ಯಕರ್ತರ ಅಭಿವೃದ್ಧಿ ಕಾರ್ಯಗಳಿಗೆ
ಮಾತ್ರವಲ್ಲದೆ ಇನ್ನಿತರ ಸಮಸ್ಯೆಗಳಿಗೂ ಸದಾ ಸ್ಪಂದಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು “ಕಾರ್ಯಕರ್ತರು ತಮ್ಮ ಸ್ವಾರ್ಥಕ್ಕಾಗಿ ಬಯಸದೆ ಗ್ರಾಮದ ಅಭಿವೃದ್ಧಿ ಪರ ಚಿಂತನೆಯಿಂದ ಹಲವಾರು ಬೇಡಿಕೆಗಳನ್ನು ಇರಿಸಿರುತ್ತೀರಿ. ಈಗಾಗಲೇ ಬೇಡಿಕೆಯಂತೆ ಆಲೆಟ್ಟಿ ಗ್ರಾಮದ ಏಣಾವರ ಎಂಬಲ್ಲಿ ಸೇತುವೆ ನಿರ್ಮಾಣಕ್ಕಾಗಿ ರೂ.1.5 ಕೋಟಿ ಬಿಡುಗಡೆ ಯಾಗಿದೆ. ಕುಕ್ಕಂಬಳ ಸೇತುವೆಗೆ ಎಸ್ಟಿಮೇಟ್ ಪ್ರಕಾರ 8 ಕೋಟಿಯ ಪ್ರಸ್ತಾವನೆಯನ್ನು ಡಿ.ಸಿ.ಎಂ. ಡಿ.ಕೆ ಶಿವಕುಮಾರ್ ರವರಿಗೆ ಸಲ್ಲಿಸಿದ್ದೇನೆ. ಅಷ್ಟು ದೊಡ್ಡ ಮೊತ್ತ ಅನುದಾನ ಸಿಗುವ ಸಾಧ್ಯತೆ ಇಲ್ಲವಾದ್ದರಿಂದ ಮತ್ತೆ 5 ಕೋಟಿ ಎಸ್ಟಿಮೇಟ್ ಮಾಡಿಕೊಟ್ಟಿದ್ದೇವೆ‌.ಇದರ ಹಿಂದೆ ಬಿದ್ದು ಅನುದಾನ ಬಿಡುಗಡೆಗೆ ಖಂಡಿತವಾಗಿ ಪ್ರಯತ್ನಿಸುತ್ತೇನೆ. ಗ್ರಾಮದಲ್ಲಿ ಸಂಪರ್ಕದ ರಸ್ತೆ ಅಭಿವೃದ್ಧಿಗೆ ಹಾಗೂ ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ತರಿಸುವಲ್ಲಿಯೂ ಪ್ರಯತ್ನಿಸುವುದಾಗಿ ತಿಳಿಸಿದರು. ಸಂಜೆಯಿಂದ ರಾತ್ರಿ ತನಕ ತಾಳ್ಮೆಯಿಂದ ಕಾದು ಕುಳಿತು ಗ್ರಾಮದ ಅಭಿವೃದ್ಧಿಗೆಒತ್ತುಕೊಡುವ ಕಾರ್ಯಕರ್ತರನ್ನು ಅವರು ಪ್ರಶಂಸಿದರು.

ಆಲೆಟ್ಟಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ,ಜಿಲ್ಲಾಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿತೊಟ್ಟು, ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ವಿಕಸಿತ ಭಾರತ ಸಂಕಲ್ಪ ಅಭಿಯಾನ ಜಿಲ್ಲಾ ಸಂಚಾಲಕ ಹರೀಶ್ ಕಂಜಿಪಿಲಿ, ಸುಳ್ಯ ಮಂಡಲ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಜಾಲ್ಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹೇಮಂತ್ ಮಠ, ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ಆಲೆಟ್ಟಿ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಮನವಳಿಕೆ, ಪನತ್ತಡಿ ಪಂಚಾಯತ್ ಸದಸ್ಯ ವೇಣುಗೋಪಾಲ್ ಕೆ.ಕೆ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಯಾಯ ವಾರ್ಡುವಾರು ಕಾರ್ಯಕರ್ತರ ಪೈಕಿ ದಿನೇಶ್ ಕಣಕ್ಕೂರು, ಜಗದೀಶ್ ಕೂಳಿಯಡ್ಕ, ಧನಂಜಯ ಕುಂಚಡ್ಕ, ಮಹೇಶ್ ಕುತ್ಯಾಳ, ಸುದೇಶ್ ಅರಂಬೂರು, ಶ್ರೀಪತಿ ಭಟ್ ಮಜಿಗುಂಡಿ, ಹರಿಪ್ರಸಾದ್ ಕಾಪುಮಲೆ, ಪ್ರವೀಣ್ ಕಲ್ಲೆಂಬಿ, ಸುಧಾಕರ ನಾಗಪಟ್ಟಣ, ವೇಣುಗೋಪಾಲ ಪನತ್ತಡಿ ಯವರು ಗ್ರಾಮದ ಅಭಿವೃದ್ಧಿ ಕಾರ್ಯಗಳ
ಬೇಡಿಕೆಯನ್ನು ಸಂಸದರ ಮತ್ತು ಶಾಸಕರ ಮುಂದೆ ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಸಂಸದರು ಹಾಗೂ ಶಾಸಕರು ಮತ್ತು ಗಣ್ಯರು ಪುಷ್ಪಾರ್ಚನೆ ಮಾಡಿದರು.
ಕು.ಇಂಚರ ಮತ್ತು ಕು.ದಿಶಾ ಆಲೆಟ್ಟಿ ಪ್ರಾರ್ಥಿಸಿದರು.
ಜಾಲ್ಸೂರು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸುದರ್ಶನ ಪಾತಿಕಲ್ಲು ಸ್ವಾಗತಿಸಿ, ಪ್ರವೀಣ್ ಕಲ್ಲೆಂಬಿ ‌ವಂದಿಸಿದರು. ಆಲೆಟ್ಟಿ ‌ಪಂಚಾಯತ್ ಸದಸ್ಯ ಶಿವಾನಂದ ರಂಗತ್ತಮಲೆ ಕಾರ್ಯಕ್ರಮ ನಿರೂಪಿಸಿದರು. ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದರು.

ಸಂಜೆ 4.30 ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮವು
ರಾತ್ರಿ 7.30 ಕ್ಕೆ ಆರಂಭಗೊಂಡು‌
ರಾತ್ರಿ 9.30 ಕ್ಕೆ ಮುಕ್ತಾಯಗೊಂಡಿತು.