ಸಂಪಾಜೆ : ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಅಹವಾಲು ಸ್ವೀಕಾರ

0

ಆನೆ ಹಾವಳಿ , ಹಳದಿರೋಗ , ಎಲೆಚಿಕ್ಕಿ ರೋಗಕ್ಕೆ ಕೃಷಿಕರಿಗೆ ಶಾಶ್ವತ ಪರಿಹಾರ ನೀಡುವಂತೆ ಸರಕಾರಕ್ಕೆ ಮನವಿ : ಕ್ಯಾ. ಬ್ರಿಜೇಶ್ ಚೌಟ

ಗ್ರಾಮೀಣ ಪ್ರದೇಶಕ್ಕೆ ಹೆಚ್ಚುವರಿ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರಿಂದ ಒತ್ತಾಯ

ಸಂಪಾಜೆ ಸುತ್ತಮುತ್ತಲಿನ ವ್ಯಾಪಿಯಲ್ಲಿ ಪ್ರದೇಶದಲ್ಲಿ ಹೆಚ್ಚಾಗಿ ರೈತರು ಕೃಷಿಯನ್ನು ಅವಲಂಬಿಸಿದ್ದು ,
ಅಡಿಕೆ ಹಳದಿರೋಗ, ಎಳೆಚುಕ್ಕಿ ರೋಗ, ಹಾಗೂ ಆನೆ ಹಾವಳಿ , ಮಂಗಗಳ ಹಾವಳಿ ಯಿಂದ ಕೃಷಿಕರ ಭಾರೀ ನಷ್ಟಕ್ಕೆ ಒಳಗಾಗಿದ್ದು ಸರಕಾರದಿಂದ ಅನುದಾನ ಒದಗಿಸಿಕೊದಲಾಗುವುದು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. ಅವರು ಜು. 15 ರಂದು ದ. ಕ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸಂಪಾಜೆ ಕಲ್ಲುಗುಂಡಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಮತ್ತು ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸುಳ್ಯ ತಾಲೂಕು ಸೇರಿದಂತೆ ಎಲ್ಲಾ ಕಡೆಗಳಲ್ಲೂ ಹೆಚ್ಚಾಗಿ ಸಾಂಕ್ರಾಮಿಕ ಕೀಟಗಳಿಂದ ಅಡಿಕೆ , ಎಲೆ ಚುಕ್ಕಿ ರೋಗಗಳು ಬಾಧಿಸಿ ಇಡೀ ಕೃಷಿಯನ್ನೇ ಹಾಳುಮಾಡಿದೆ. ಇದರಿಂದ ಕೃಷಿಕರು ಕಂಗಾಲಾಗುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮನ ಮುಟ್ಟಿಸುವ ಜೊತೆಗೆ ಅಡಿಕೆ ಕೃಷಿಗೆ ಪರ್ಯಾಯ ಬೆಳೆಯಾಗಿ ವಾತಾವರಣಕ್ಕೆ ಅನುಕೂಲವಾಗುವಂತೆ ರೈತರಿಗೆ ಕಾಫಿ ಬೆಳೆಯುವ ಮಾಹಿತಿ ಮತ್ತು ತರಬೇತಿಯನ್ನು ಇಲಾಖೆಯ ಮೂಲಕ ಕೊಡಿಸುವ ಕೆಲಸ ಆಗಬೇಕಿದೆ. ಜೊತೆಗೆ ಶಾಸಕರೊಡನೆ ಮತ್ತು ಇಲಾಖಾಅಧಿಕಾರಿಗಳಿಂದ ಎಸ್ಟು ಕೃಷಿಕರಿಗೆ ಕಾಡು ಪ್ರಾಣಿಗಳಿಂದ ಕೃಷಿ ಹಾನಿ ಸಂಭವಿಸಿದೆ ಎಂದು ಮಾಹಿತಿ ಪಡೆದು , ಗ್ರಾಮದ ಕೃಷಿಕರ ಸಮಸ್ಯೆಗಳ ಬಗ್ಗೆ ಕುರಿತು ಸರ್ಕಾರಕ್ಕೆ ಮನ ಮುಟ್ಟಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳಿದ್ದರೂ ಹೆಚ್ಚಿನ ಚಿಕಿತ್ಸೆಗಾಗಿ ತುರ್ತು ವಾಹನಗಳ ವ್ಯವಸ್ಥೆ ಆಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಹಾಗೂ ಪ್ಲಾಟಿಂಗ್ ಸಮಸ್ಯೆ, ರಸ್ತೆ ಅಭಿವೃದ್ಧಿ, ಗ್ರಾಮಕ್ಕೆ ತುರ್ತು ಸಂದರ್ಭದಲ್ಲಿ ಹೆಚ್ಚುವರಿ ಅಂಬ್ಯುಲೆನ್ಸ್ ವ್ಯವಸ್ಥೆ , ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಲಾಯಿತು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ
ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರೆಲ್ಲರೂ ಒಂದಾಗಿ ದುಡಿಯಬೇಕಾಗಿದೆ . ಅದರಲ್ಲೂ ಸಂಪಾಜೆ ಗ್ರಾಮ ವ್ಯಾಪಿಯಲ್ಲಿ ಕೃಷಿಕರ ಸಂಖ್ಯೆ ಹೆಚ್ಚಾಗಿದ್ದು , ಮುಂದಿನ ದಿನಗಳಲ್ಲಿ ಕೃಷಿ ಕರೊಡನೆ ಸಂವಾದ ಕಾರ್ಯಕ್ರಮ ಮಾಡುವ ಕುರಿತು ಹಾಗೂ
ಕೃಷಿಕರ ಸಮಸ್ಯೆಗೆ ಸೂಕ್ತ ಪರಿಹಾರವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ನೀಡಲಾಗುವುದು ಎಂದು ಹೇಳಿದರು.

ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ , ಕೆ. ಪಿ ಜಗದೀಶ್ ಅವರು ಪ್ರಸ್ತಾವಿಕ ಮಾತುಗಳನ್ನಾಡಿ ಸಂಪಾಜೆ ಗ್ರಾಮದ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಂದಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಯತೀಶ್ ಆರ್ವಾರ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ , ಸಂಕಲ್ಪದಿಂದ ಸಾಧನೆಯೆಡೆಗೆ ಜಿಲ್ಲಾ ಸಂಚಾಲಕ ಹಾಗೂ ಮಾಜಿ ಮಂಡಲ ಅಧ್ಯಕ್ಷ ಹರೀಶ್ ಕoಜಿಪಿಲಿ , ಸುಳ್ಯಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ , ಪ್ರದೀಪ್ ರೈ ಮನವಳಿಕೆ, ಪಕ್ಷದ ಪ್ರಮುಖರಾದ ಸುಬೋಧ್ ಶೆಟ್ಟಿ ಮೇನಾಲ, ಗಣಪತಿ ಭಟ್, ಕೆ. ಪಿ ಜಗದೀಶ್ , ಎಸ್ ಪಿ ಲೋಕನಾಥ್ , ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರ ಬಿದಿರೆ, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ , ಗುತ್ತಿಗಾರು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸತೀಶ್ ನಾಯ್ಕ್,
ನಾಗೇಶ್ ಪೇರಾಲು ,ರಜನಿ ಶರತ್, ವರದ ರಾಜ್ ಸಂಕೇಶ, ಕೇಶವ ಬಂಗ್ಲೆ ಗುಡ್ಡೆ , ವಿಜಯ ಆಲಡ್ಕ , ಬಾಲ ಚಂದ್ರ ಎಸ್. ಪಿ. ಜಯಾನಂದ ಸಂಪಾಜೆ , ಬಾಲ ಚಂದ್ರ ಪೆಲ್ತಡ್ಕ , ಧನಪಾಲ ಕೆ.ಆರ್ , ಶಿಲ್ಪಾ ಸನತ್ ,ವೆಂಕಪ್ಪ ಗೌಡ ಪೆರಂಗೋಡಿ , ಕರುಣಾಕರ ಎಸ್. ಪಿ , ಪುಷ್ಪಾ ಮೇದಪ್ಪ , ಭಾರತಿ ಪುರುಷೋತ್ತಮ ಉಳುವಾರು, ಮನೋಜ್ ಜಿ.ಎಸ್ , ಕೃಷ್ಣ ಪ್ರಸಾದ್ ಕಾಪಿಲ , ಹೇಮನಾಥ್ ಕಡೆಪಾಲ ಸೇರಿದಂತೆ ನೂರಾರು ಕಾರ್ಯಕರ್ತರು , ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ
ಉಪಸ್ಥಿತರಿದ್ದರು.

ಬಳಿಕ ಸಾವರ್ಜನಿಕರಿಂದ ವಿವಿಧ ಬೇಡಿಕೆಗಳ ಬಗ್ಗೆ ಅಹವಾಲು ಸ್ವೀಕಾರ ಮಾಡಲಾಯಿತು. ತದನಂತರ ಯಶಸ್ವಿ ಯುವಕ ಮಂಡಲ ಕಲ್ಲುಗುಂಡಿ ವತಿಯಿಂದ ಸಂಸದ ಕ್ಯಾಪ್ಟನ್ ಜ್ರಿಜೇಶ್ ಚೌಟ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರಿಗೆ ಸನ್ಮಾನ ಮಾಡಲಾಯಿತು.

ಮನೀಶ್ ಗೂನಡ್ಕ ಸ್ವಾಗತಿಸಿ , ತೇಜೇಶ್ ಬಂಟೋಡಿ ಪ್ರಾರ್ಥಿಸಿ,
ಶರತ್ ಕೀಲಾರು ಕಾರ್ಯಕ್ರಮ ನಿರೂಪಿಸಿ , ವಿಜಯ ಆಲಡ್ಕ ವಂದಿಸಿದರು .