ಗೂನಡ್ಕ ಶಾಲೆಯ ಶಿಕ್ಷಕಿ ಭವಾನಿ ಪಿ. ನಿವೃತ್ತಿ

0

ಶಿಕ್ಷಕಿಗೆ ಬೀಳ್ಕೊಡುಗೆ : ವಿದ್ಯಾರ್ಥಿಗಳಿಂದ ಸ್ವಾಗತ

ಗೂನಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಭವಾನಿ ಪಿ. ಅವರು ಸೇವಾ ನಿವೃತ್ತಿಯನ್ನು ಹೊಂದಿದ್ದು, ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸಿಂಗಾರಿ ಮೇಳದ ಚೆಂಡೆ ವಾದನಗಳೊಂದಿಗೆ ವಿದ್ಯಾರ್ಥಿಗಳು ಟೀಚರ್ ಅನ್ನು ಸ್ವಾಗತಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ರವೀಂದ್ರ ಆರ್. ವಹಿಸಿಕೊಂಡಿದ್ದರು. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಉದ್ಘಾಟಿಸಿದರು. ಸಹಕಾರಿ ನೌಕರರ ಸಂಘದ ನಿರ್ದೇಶಕ ಗೋಪಾಲಕೃಷ್ಣ ಬನ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜ್ ಎಸ್ .ಕೆ, ಗ್ರಾಮ ಪಂಚಾಯತ್ ಸದಸ್ಯೆ ಅನುಪಮಾ, ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ, ಸ್ವಾಮಿ ಕೊರಗಜ್ಜ ದೈವಸ್ಥಾನ ಇದರ ಆಡಳಿತ ಮೊಕ್ತೇಸರರಾದ ಚಂದ್ರಶೇಖರ್ ಜಿ.ಕೆ. ಮೊದಲಾದವರು ಉಪಸ್ಥಿತರಿದ್ದರು.