ಬಾಳುಗೋಡು : ಭಾಜಪ ಬೂತ್ ಸಮಿತಿಯ ವತಿಯಿಂದ ದ.ಕ ಜಿಲ್ಲಾ ಸಂಸದರಿಗೆ ಮನವಿ

0

ನಡುಗಲ್ಲಿನಲ್ಲಿ ಜು.15 ರಂದು ಭಾಜಪಾ ಗುತ್ತಿಗಾರು ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಮಾವೇಶ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಿದ್ದು ಬಾಳುಗೋಡು ಭಾಜಪ ಬೂತ್ ಸಮಿತಿಯ ಕಾರ್ಯಕರ್ತರು ಊರಿನ ಕೆಲವು ಬೇಡಿಕೆಗಳ ಬಗ್ಗೆ ಮನವಿಯನ್ನು ಸಲ್ಲಿಸಿದರು .

ಬಾಳುಗೋಡಿನ ಶಿಥಿಲಗೊಂಡ ಮುಳುಗು ಸೇತುವೆಯನ್ನು ಮೇಲ್ದರ್ಜೆಗೇರಿಸುವುದು, ಬಾಳುಗೋಡಿನ ಬಿ.ಎಸ್.ಎನ್.ಎಕ್ ಟವರ್ ಸರಿಯಾಗಿ ಕಾರ್ಯನಿರ್ವಹಿಸದಿರುವುದರ ಬಗ್ಗೆ,
ಬಾಳುಗೋಡು – ಮಿತ್ತಡ್ಕ ರಸ್ತೆ ಹಾಗೂ ಕಾಲು ಸೇತುವೆ ನಿರ್ಮಿಸುವುದು ಕುರಿತು, ಬಾಳುಗೋಡಿನಿಂದ ತಾಲ್ಲೂಕು ಕೇಂದ್ರ ಸುಳ್ಯಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿಕೊಡುವುದು. ಬಾಳುಗೋಡು – ಕಿರಿಭಾಗ ರಸ್ತೆ ಹಾಗೂ ಬೆಟ್ಟುಮಕ್ಕಿ – ಕೋಟೆ – ಐನೆಕಿದು ಕಾಂಕ್ರೀಟ್ ರಸ್ತೆ ಮಾಡುವ ಬಗ್ಗೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾ ಪಂ. ಉಪಾಧ್ಯಕ್ಷರಾದ ಜಯಂತ ಬಾಳುಗೋಡು, ಬೂತ್ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ಕಟ್ಟೆಮನೆ, ಕಾರ್ಯದರ್ಶಿ ಅಜೇಯ ಪೊಯ್ಯಮಜಲು, ಚಂದ್ರಹಾಸ ಶಿವಾಲ, ಡಾ. ಸೋಮಶೇಖರ್ ಕಟ್ಟೆಮನೆ, ರಾಜೇಶ್ ಕಿರಿಭಾಗ ಯಕ್ಷಿತ್ ಬೃಂದಾವನ ಮತ್ತಿತ ಉಪಸ್ಥಿತರಿದ್ದರು.