ಕಲ್ಲಪ್ಪಳ್ಳಿಯಲ್ಲಿ ಸಂಭ್ರಮ ಯೋಜನೆಯ ಕೋಳಿ ಸಾಕಾಣಿಕ ಕೇಂದ್ರದ ಉದ್ಘಾಟನೆ

0

ಪರಪ್ಪ ಬ್ಲಾಕ್ ಪಂಚಾಯತ್‌ನ ವತಿಯಿಂದ 2025-26 ನೇಸಾಲಿನಲ್ಲಿಮಹಿಳೆಯರಿಗೆ “ಸಂಭ್ರಮ” ಎಂಬ ವಾರ್ಷಿಕ ಯೋಜನೆಯಲ್ಲಿ ಮಂಜೂರಾದ ಪ್ರಕೃತಿ ಪೌಲ್ಟ್ರಿ ಫಾರ್ಮ್ ನ್ನು
ಜು. 16 ರಂದು ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶ್ರೀಮತಿಎಂ.ಲಕ್ಷ್ಮಿ ಉದ್ಘಾಟಿಸಿದರು.

ಕಲ್ಲಪ್ಪಳ್ಳಿಯಅರುಣುಗುಂಜದಲ್ಲಿ ಪ್ರಾರಂಭಗೊಂಡ ಕೋಳಿ ಸಾಕಾಣಿಕಾ ಘಟಕಕ್ಕೆ ಬ್ಲಾಕ್ ಪಂಚಾಯತ್ ಶಿಫಾರಸ್ಸಿನ ಮೇರೆಗೆ 6 ಲಕ್ಷ ಸಾಲ ಮಂಜೂರಾಗಿದ್ದು 3.5 ಲಕ್ಷ ಸಬ್ಸಿಡಿ
ಬ್ಲಾಕ್ ಪಂಚಾಯತ್ ವತಿಯಿಂದ ಧನಸಹಾಯ ಸಿಗಲಿದೆ. ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪ್ರಸನ್ನ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಪಂ.ಅಭಿವೃದ್ಧಿ ಅಧಿಕಾರಿ
ಜಹೀರ್ ಪಿ. ವಿ ವರದಿ ಮಂಡಿಸಿದರು.


ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಕೃಷ್ಣ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮಕುಮಾರಿ,ಚಂದ್ರಮ,
ಶ್ರೀಮತಿ ನಳಿನಾಕ್ಷಿ ಉಪಸ್ಥಿತರಿದ್ದರು.

ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ಸ್ವಾಗತಿಸಿ.
ಪ್ರಕೃತಿ ಪೌಲ್ಟ್ರಿ ಫಾರಂ ನ ಕಾರ್ಯದರ್ಶಿ ದಿವ್ಯ .ಹೆಚ್ ಜಿ ವಂದಿಸಿದರು.