ಸುಬ್ರಹ್ಮಣ್ಯ : ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಮಾನಾಡು

0

ಕಾರ್ಯದರ್ಶಿಯಾಗಿ ನಿತಿನ್ ಭಟ್, ಕೋಶಾಧಿಕಾರಿಯಾಗಿ ಹರ್ಷಿತ್ ನೂಚಿಲ

ಸುಬ್ರಹ್ಮಣ್ಯದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಮಹಾಸಭೆಯು ಸಮಿತಿಯ ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್ ಅವರ ಅಧ್ಯಕ್ಷತೆಯಲ್ಲಿ ಜು.9 ರಂದು ಜರುಗಿತು. ಸಭೆಯಲ್ಲಿ ಲೆಕ್ಕಪತ್ರ ಮಂಡನೆ ಸೇರಿದಂತೆ ೨೦೨೫ರಲ್ಲಿ ನಡೆಯುವ ೨೧ನೇ ವರ್ಷದ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಮಾನಾಡು ಆಯ್ಕೆಯಾದರು. ಕಾರ್ಯದರ್ಶಿಯಾಗಿ ನಿತಿನ್ ಭಟ್, ಕೋಶಾಧಿಕಾರಿಯಾಗಿ ಹರ್ಷಿತ್ ನೂಚಿಲ ನೇಮಕಗೊಂಡರು.


ಉಳಿದಂತೆ ಉಪಾಧ್ಯಕ್ಷರಾಗಿ ಶೇಖರ್ ಕುಕ್ಕೆ, ರವೀಂದ್ರ.ಕೆ.ಸುಬ್ರಹ್ಮಣ್ಯ, ಸುಹಾಸ್ ಎಸ್.ಎಸ್, ಸುಕೇಶ್ ಬೇಕಲ್ ಆಯ್ಕೆಯಾದರು. ಜತೆ ಕಾರ್ಯದರ್ಶಿಯಾಗಿ ದಿನೇಶ್ ಎಸ್.ಎನ್, ಜತೆಕೋಶಾಧಿಕಾರಿಯಾಗಿ ಶ್ರೀಕುಮಾರ್ ಬಿಲದ್ವಾರ ನೇಮಕಗೊಂಡರು.
ಗೌರವ ಸಲಹೆಗಾರಾಗಿ ರವೀಂದ್ರ ಕುಮಾರ್ ರುದ್ರಪಾದ, ಯಜ್ಞೇಶ್ ಆಚಾರ್,ಎ.ವೆಂಕಟರಾಜ್. ಸಂಚಾಲಕರಾಗಿ ಶ್ರೀಧರ್ ಭಟ್, ರಾಜೇಶ್ ಎನ್.ಎಸ್, ಶ್ರೀ ಕೃಷ್ಣ ಶರ್ಮಾ, ಎಚ್. ಎಲ್ ವೆಂಕಟೇಶ್ , ಲೋಕೇಶ್ ಬಿ. ಎನ್ ಇರಲಿದ್ದಾರೆ.